ದೇಶ

ಮಹಾ ಸರ್ಕಾರ ರಚನೆ: ಶಿವಸೇನೆಗೆ ಎನ್ ಸಿಪಿ ಬೆಂಬಲ!: ನ.11 ರಂದು ರಾಜ್ಯಪಾಲರನ್ನು ಭೇಟಿ ಮಾಡಲಿರುವ ಉದ್ಧವ್ ಠಾಕ್ರೆ 

Srinivas Rao BV

ಮಹಾರಾಷ್ಟ್ರದಲ್ಲಿ ತಾನು ಸರ್ಕಾರ ರಚನೆ ಮಾಡುವುದಿಲ್ಲ ಎಂದು ಬಿಜೆಪಿ ಸ್ಪಷ್ಟನೆ ನೀಡಿದ ಬಳಿಕ ಈಗ ಶಿವಸೇನೆ ಸರ್ಕಾರ ರಚನೆಗೆ ಮುಂದಾಗಲಿರುವುದರ ಬಗ್ಗೆ ನಿರೀಕ್ಷೆಗಳು ಮೂಡಿವೆ. 

ಬಿಜೆಪಿ ತನ್ನ ನಿರ್ಧಾರವನ್ನು ತಿಳಿಸುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಶಿವಸೇನೆ ನಾಯಕ ಸಂಜಯ್ ರಾವುತ್, ಮಹಾರಾಷ್ಟ್ರದಲ್ಲಿ ಶಿವಸೇನೆಯಿಂದಲೇ ಮುಖ್ಯಮಂತ್ರಿ ಪದಗ್ರಹಣವಾಗಲಿದೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಮಾಧ್ಯಮವಾಗಿರುವ ಜೀ ನ್ಯೂಸ್ ನ ವರದಿಯ ಪ್ರಕಾರ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನ.11 ರಂದು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆ ಇದೆ. 

ಸರ್ಕಾರ ರಚಿಸಲು ಬೆಂಬಲ ನೀಡುವುದಕ್ಕೆ ಶಿವಸೇನೆ ಕಾಂಗ್ರೆಸ್-ಎನ್ ಸಿಪಿ ಜೊತೆ ಮಾತುಕತೆ ನಡೆಸುತ್ತಿದೆ. ಕಾಂಗ್ರೆಸ್ ನ ಬಾಹ್ಯ ಬೆಂಬಲದಿಂದ ಶಿವಸೇನೆ-ಎನ್ ಸಿಪಿ ಮೈತ್ರಿ ಸರ್ಕಾರ ರಚನೆ ಸಾಧ್ಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
 

SCROLL FOR NEXT