ಶಬರಿಮಲೆ ಅಯ್ಯಪ್ಪ ದೇವಾಲಯ 
ದೇಶ

ನಾಳೆ ಶಬರಿಮಲೆ 'ಸುಪ್ರೀಂ' ತೀರ್ಪು ಪ್ರಕಟ: ಕೇರಳದಾದ್ಯಂತ ವ್ಯಾಪಕ ಕಟ್ಟೆಚ್ಚರ

ಅಯೋಧ್ಯೆ ತೀರ್ಪು ಬಂದ ನಂತರ ದೇಶದ ಜನತೆ ಬಹುಕಾಲದಿಂದ ಕಾಯುತ್ತಿರುವ ಇನ್ನೊಂದು ಮಹತ್ವದ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನಾಳೆ ಉಚ್ಚರಿಸಲಿದೆ. ಅದುವೇ ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಂತೆ ಮರುಪರಿಶೀಲನೆ ಅರ್ಜಿ....

ತಿರುವನಂತಪುರಂ: ಅಯೋಧ್ಯೆ ತೀರ್ಪು ಬಂದ ನಂತರ ದೇಶದ ಜನತೆ ಬಹುಕಾಲದಿಂದ ಕಾಯುತ್ತಿರುವ ಇನ್ನೊಂದು ಮಹತ್ವದ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನಾಳೆ ಉಚ್ಚರಿಸಲಿದೆ. ಅದುವೇ ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಂತೆ ಮರುಪರಿಶೀಲನೆ ಅರ್ಜಿ ತೀರ್ಪಾಗಿದೆ. ಸುಪ್ರೀಂ ಕೋರ್ಟ್ ಗುರುವಾರ ಶಬರಿಮಲೆ ಪರಿಶೀಲನಾ ಅರ್ಜಿಗಳ ಕುರಿತಂತೆ ತನ್ನ ತೀರ್ಮಾನ ಹೇಳಲಿದೆ. ಇದು  ಕೇರಳದ ಎಡಪಕ್ಷದ ಸರ್ಕಾರಕ್ಕೆ ರಾಜ್ಯದಲ್ಲಿ ಪ್ರಮುಖ ರಾಜಕೀಯ ಬೆಳವಣೆಗೆಗಳನ್ನು  ಉಂಟುಮಾಡುವ ತೀರ್ಪ ಎನ್ನಲಾಗಿದೆ.

ಮಂಡಲ ಮಕರವಿಳಕ್ಕುಂ ಋತುಮಾನವು ನವೆಂಬರ್ 16 ರಂದು ಪ್ರಾರಂಭವಾಗಲಿದ್ದು ಇದರಿಂದಾಗಿ ಈ ತೀರ್ಪು ಹೆಚ್ಚಿನ ಮಹತ್ವ ಪಡೆದಿದೆ/

ಕಳೆದ ಬಾರಿ, ಎಡಪಕ್ಷದ ಆಡಳಿತವು  ಎಲ್ಲಾ ವಯಸ್ಸಿನ ಮಹಿಳೆಯರಿಗೆ ಬೆಟ್ತದ ಮೇಲಿನ ಅಯ್ಯಪ್ಪಸ್ವಾಮಿ ಆಲಯಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುವ ಸುಪ್ರೀಂ ಕೋರ್ಟ್ ತೀರ್ಪನ್ನು  ಜಾರಿಗೆ ತರುವ ಕ್ರಮಗಳನ್ನು ಮುಂದಿಟ್ಟಿತ್ತು, ಇದರಿಂದಾಗಿ ವಿವಿಧ ಮೂಲೆಗಳಿಂದ  ಜನರನ್ನು ಕರೆತರಲಾಗಿತ್ತು. ಹೀಗಾಗಿ ದೇವಾಲಯಕ್ಕೆ ತೆರಳುವ ದಾರಿಯಲ್ಲಿ ಮಹಿಳಾ ಯಾತ್ರಿಕರನ್ನು ನಿರ್ಬಂಧಿಸಿ ಭಾರೀ ಪ್ರತಿಭಟನೆಗಳು ಸಹ ನಡೆದಿದ್ದವು. ಇದರಿಂದ ಮಂಡಲದ ಅವಧಿಯುದ್ದಕ್ಕೂ  ಸಾಕಷ್ಟು ಉದ್ವಿಗ್ನತೆ ಉಂಟಾಯಿತು.

ಅಂತೆಯೇ ನಾಳಿನ ಸುಪ್ರೀಂ ತೀರ್ಪಿಗೆ ಎಡಪಕ್ಷದ ಸರ್ಕಾರದ ಪ್ರತಿಕ್ರಿಯೆ ಅತ್ಯಂತ ಮುಖ್ಯವಾಗಿರಲಿದೆ.ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತ್ತು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಇದಾಗಲೇ ಅಯೋಧ್ಯೆಯ ತೀರ್ಪಿನಂತೆ ಶಬರಿಮಲೆ ಪರಿಶೀಲನಾ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

"ಎಲ್ಲರೂ ತೀರ್ಪನ್ನು ಶಾಂತವಾಗಿ ಒಪ್ಪಿಕೊಳ್ಳಬೇಕು. ಸುಪ್ರೀಂ  ತೀರ್ಪಿನ ಪ್ರಕಾರ ಸರ್ಕಾರ ಕ್ರಮ ಕೈಗೊಳ್ಳುತ್ತದೆ" ಎಂದು ದೇವಸ್ವಂ ಮಂಡಳಿಯ ಅಧ್ಯಕ್ಷ ಎ ಪದ್ಮಕುಮಾರ್ ಹೇಳಿದರು.

ಶಬರಿಮಲೆ ವೈಫಲ್ಯದ ಬಳಿಕ ಕೇರಳದಲ್ಲಿ ಎಡಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಭಾರೀ ಸೋಲು ಕಂಡಿದೆ. ಆ ಮೂಲಕ ಸಿಪಿಎಂ ತನ್ನ ಶಬರಿಮಲೆ ನಿಲುವನ್ನು ಪುನರ್ವಿಮರ್ಶಿಸುವಂಟಾಗಿದೆ.ಪಕ್ಷವು ಶಬರಿಮಲೆ ಸಮಸ್ಯೆಯನ್ನು ನಿಭಾಯಿಸುವಲ್ಲಿನ ತನ್ನ ದೋಷಗಳನ್ನು ಬಹಿರಂಗವಾಗಿ ಒಪ್ಪಿಕೊಂಡಿತು, ಮತ್ತು ನಂತರ ಇತ್ತೀಚಿನ ಉಪಚುನಾವಣೆಗಳಲ್ಲಿ ಪ್ರಮುಖ ಗೆಲುವನ್ನು ದಾಖಲಿಸಿದೆ.

ಈ ಸಮಯದಲ್ಲಿ, ಸರ್ಕಾರ ಮತ್ತು ಸಿಪಿಎಂ ನೇತೃತ್ವದ ಎಡಪಂಥೀಯರು ಶಬರಿಮಲೆ ಮಟ್ಟಿಗೆ ಎಚ್ಚರಿಕೆಯ ವಿಧಾನವನ್ನು ಅನುಸರಿಸಲು ತೀರ್ಮಾನಿಸಿದ್ದಾರೆ.  ಯಾರನ್ನೂ ಶಬರಿಮಲೆಗೆ ಕರೆದೊಯ್ಯುವ ಉದ್ದೇಶವಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಅದೇ ಸಮಯದಲ್ಲಿ ಸುಪೆಈಂ  ತೀರ್ಪನ್ನು ಜಾರಿಗೆ ತರಲು ಸರ್ಕಾರವು ಬದ್ದವಾಗಿದೆ ಎಂದೂ ಹೇಳಿದೆ. ಗುರುವಾರದ ತೀರ್ಪನ್ನು ಅವಲಂಬಿಸಿ ದೇವಾಲಯದಲ್ಲಿ ಹೆಚ್ಚಿದ ಭದ್ರತಾ ಕ್ರಮಗಳು ಮತ್ತು ಹೆಚ್ಚಿನ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಸರ್ಕಾರ ಕರೆ ನೀಡಲಿದೆ
 

ರಾಫೆಲ್ ಕುರಿತಂತೆ ಸುಪ್ರೀಂ ತೀರ್ಪು ನಾಳೆ

ಫ್ರೆಂಚ್ ಸಂಸ್ಥೆ ಡಸಾಲ್ಟ್ ಏವಿಯೇಷನ್‌ನೊಂದಿಗಿನ ರಾಫೆಲ್  ಫೈಟರ್ ಜೆಟ್ ಒಪ್ಪಂದದಲ್ಲಿ ಮೋದಿ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಕಟಿಸಲಿದೆ.

ಮಾಜಿ ಕೇಂದ್ರ ಸಚಿವರಾದ ಯಶ್ವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಕಾರ್ಯಕರ್ತ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಒಳಗೊಂಡಂತೆ ಅರ್ಜಿಗಳ ತೀರ್ಪು ಣಾಳೆ ಹೊರಬೀಳಲಿದೆ.

ಇದೇ ಮೇ 10 ರಂದು ಸುಪ್ರೀಂ ಕೋರ್ಟ್ ಈ ತೀರ್ಪನ್ನು ಕಾಯ್ದಿರಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT