ದೇಶ

ಮಾಜಿ ಸಚಿವ ಡಿಕೆಶಿಗೆ 'ಸುಪ್ರೀಂ'ನಿಂದ ಬಿಗ್ ರಿಲೀಫ್: ಇಡಿ ಮೇಲ್ಮನವಿ ಅರ್ಜಿ ವಜಾ

Raghavendra Adiga

ನವದೆಹಲಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾ ಮಾಡಿದೆ.

ಜಾರಿ ನಿರ್ದೇಶನಾಲಯ(ಇಡಿ) ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಮ್ದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ  ರೋಹಿಂಗ್‍ಟನ್ ನಾರಿಮನ್  ಅವರನ್ನೊಳಗೊಂಡ ಪೀಠ ಇಡಿ ಮೇಲ್ಮನವಿಯನ್ನು ಇಂದು ವಜಾಗೊಳಿಸಿದೆ

 ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಡಿ.ಕೆ.ಶಿವಕುಮಾರ್ ಅವರನ್ನು ಸೆ.3 ರಂದು ಇಡಿ ಬಂಧಿಸಿತ್ತು. ಇದರ ನಂತರ ಡಿಕೆಶಿ 48 ದಿನಗಳ ಕಾಲ ದೆಹಲಿಯ ತಿಹಾರ್ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು.ಕಳೆದ ತಿಂಗಳು ಅಂತ್ಯದಲ್ಲಿ ದೆಹಲಿ ಹೈಕೋರ್ಟ್ ಶಿವಕುಮಾರ್ ಗೆ ಜಾಮೀನು ಮಂಜೂರು ಮಾಡಿತ್ತು.

ಸಧ್ಯ ಸುಪ್ರೀಂ ಕೋರ್ಟ್ ಆದೇಶದಿಂದ ಮಾಜಿ ಸಚಿವ ಶಿವಕುಮಾರ್ ತುಸು ನಿರಾಳರಾಗಿದ್ದಾರೆ.

SCROLL FOR NEXT