ದೇಶ

ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ಸರ್ಕಾರ ರಚನೆಯಾಗಿ 5 ವರ್ಷಗಳನ್ನು ಪೂರೈಸಲಿದೆ: ಶರದ್ ಪವಾರ್ 

Sumana Upadhyaya

ಮುಖ್ಯಮಂತ್ರಿ ಸ್ಥಾನ ಶಿವಸೇನೆಗೆ ಎಂದ ಎನ್ ಸಿಪಿ 

ಮುಂಬೈ: ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ನೇತೃತ್ವದ ಸರ್ಕಾರ ಮಹಾರಾಷ್ಟ್ರದಲ್ಲಿ ರಚನೆಯಾಗಲಿದ್ದು ಸಂಪೂರ್ಣ 5 ವರ್ಷಗಳನ್ನು ಪೂರೈಸಲಿದೆ. ಮದ್ಯಂತರ ಚುನಾವಣೆ ಬರುವ ಸಾಧ್ಯತೆಯಿಲ್ಲ ಎಂದಿದ್ದಾರೆ. 


ರಾಜ್ಯದ ಅಭಿವೃದ್ಧಿ ಪರ ಸ್ಥಿರ ಸರ್ಕಾರ ರಚಿಸುವುದು ಮೂರೂ ಪಕ್ಷಗಳ ಬಯಕೆಯಾಗಿದ್ದು ಮಧ್ಯಂತರ ಚುನಾವಣೆ ಬರುವ ಸಾಧ್ಯತೆಯಿಲ್ಲ. ಈ ಸರ್ಕಾರ ರಚನೆಯಾಗಿ ಅದು 5 ವರ್ಷ ಆಡಳಿತ ಅವಧಿ ಪೂರೈಸಲಿದೆ ಎಂದು ಸುದ್ದಿಗಾರರಿಗೆ ಇಂದು ಪ್ರತಿಕ್ರಿಯಿಸಿದ್ದಾರೆ.


ಇನ್ನೊಂದೆಡೆ ಎನ್ ಸಿಪಿ ನಾಯಕ ನವಾಬ್ ಮಲಿಕ್, ಬಿಜೆಪಿಯೇತರ ಸರ್ಕಾರ ರಚನೆಗೆ ಎನ್ ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಮಧ್ಯೆ ಮಾತುಕತೆಗಳು ಮುಂದುವರಿದಿದ್ದು ಶಿವಸೇನೆಯಿಂದಲೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದಾರೆ.


ಶಿವಸೇನೆಯ ನಾಯಕರು ಮುಖ್ಯಮಂತ್ರಿಯಾಗುತ್ತಾರೆಯೇ ಎಂದು ಹಲವು ಬಾರಿ ಕೇಳುತ್ತೀರಾ, ಸಿಎಂ ಹುದ್ದೆ ವಿಚಾರವಾಗಿಯಲ್ಲವೇ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ವಾದ ವಿವಾದ ಉಂಟಾಗಿ ಮೈತ್ರಿ ಮುರಿದುಬಿದ್ದಿದ್ದು. ಹೀಗಾಗಿ ಸಿಎಂ ಹುದ್ದೆ ಶಿವಸೇನೆಗೆ ಅದರಲ್ಲಿ ಬದಲಾವಣೆಯಿಲ್ಲ. ಶಿವಸೇನೆಗೆ ಅಪಮಾನ ಮಾಡಲಾಗಿದೆ. ಅವರ ಸ್ವಾಭಿಮಾನವನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಮಲಿಕ್ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.


ಮೂರೂ ಪಕ್ಷಗಳು ಸೇರಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿದ್ದು ಅದರ ಕರಡನ್ನು ಉನ್ನತ ಮಟ್ಟದ ನಾಯಕರಿಗೆ ಕಳುಹಿಸಲಾಗಿದೆ. ಸದ್ಯದಲ್ಲಿಯೇ ನಾವು ತೀರ್ಮಾನಕ್ಕೆ ಬರುತ್ತೇವೆ, ನಮ್ಮ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ರೈತರು, ಸಾಲಮನ್ನಾ, ಉದ್ಯೋಗ ಸೃಷ್ಟಿ ಇತ್ಯಾದಿಗಳಿಗೆ ಒತ್ತು ನೀಡಲಾಗಿದೆ ಎಂದರು.

SCROLL FOR NEXT