ದೇಶ

ಹೃದಯಾಘಾತದಿಂದ ಗೋವಾ ಪೊಲೀಸ್ ಮಹಾ ನಿರ್ದೇಶಕ ಪ್ರಣಬ್ ನಂದಾ ಸಾವು

Manjula VN

ಪಣಜಿ: ರಾಷ್ಟ್ರ ರಾಜಧಾನಿಗೆ ಅಧಿಕೃತ ಭೇಟಿ ನೀಡಿದ್ದ ಗೋವಾ ಪೊಲೀಸ್ ಮಹಾ ನಿರ್ದೇಶಕ ಪ್ರಣಬ್ ನಂದಾ ಅವರು ಶನಿವಾರ ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. 

1988ರ ಬ್ಯಾಚಿನ ಐಪಿಎಸ್ ಅಧಿಕಾರಿ ಪ್ರಣಬ್ ನಂದಾ ಅವರು, ಅರುಣಾಚಲ ಪ್ರದೇಶ, ಮಿರೆರಾಂ ಹಾಗೂ ಇತರೆ ಕೇಂದ್ರಾಡಳಿತ ಕೇಡರ್'ಗೆ ಸೇರಿದ್ದಾರೆ. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಗೋವಾ ಪೊಲೀಸ್ ಮಾಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು. 

ಪ್ರಣಬ್ ನಂದಾ ಅವರ ಪತ್ನಿ ಕೂಡ ಪಾಂಡಿಚೆರಿಯಲ್ಲಿ ಪೊಲೀಸ್ ಮಹಾ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಪ್ರಣಬ್ ನಂದಾ ಅವರ ಅಕಾಲಿಕ ಮರಣಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಮೋದ್ ಸಾವಂತ್ ಅವರು, ಪ್ರಣಬ್ ನಂದಾ ಅವರ ಸಾವು ಆಘಾತ ಹಾಗೂ ಅತೀವ್ರ ಬೇಸರವನ್ನು ತರಿಸಿದೆ. ಅವರ ಕುಟುಂಬಕ್ಕೆ ಸಂತಾಪವನ್ನು ಸೂಚಿಸುತ್ತೇನೆಂದು. ನೋವು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲೆಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ. 

SCROLL FOR NEXT