ದೇಶ

ವಿದ್ಯುತ್ ಬಳಕೆ: ಮಾದರಿಯಾಯ್ತು ಉತ್ತರ ಪ್ರದೇಶ ಇಂಧನ ಸಚಿವರ ಈ ನಡೆ! 

Srinivas Rao BV

ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ತಮ್ಮ ಮನೆಯಲ್ಲಿ ಪ್ರೀಪೇಯ್ಡ್ ವಿದ್ಯುತ್ ಮಾಪಕವನ್ನು ಅಳವಡಿಸಿಕೊಂಡಿದ್ದು ಇತರ ಸಚಿವರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ. 

25 KV ಸಾಮರ್ಥ್ಯ ಹೊಂದಿರುವ ಪ್ರೀಪೇಯ್ಡ್ ಮಾಪಕವನ್ನು ಶ್ರೀಕಾಂತ್ ಶರ್ಮ ಕಾಳಿದಾಸ ಮಾರ್ಗ್ ನಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಅಳವಡಿಸಿಕೊಂಡಿದ್ದಾರೆ. ಪ್ರೀಪೇಯ್ಡ್ ಮಾಪಕದಲ್ಲಿರುವ ಮಿತಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ವಿದ್ಯುತ್ ಪೂರೈಕೆ ಸ್ವಯಂಚಾಲಿತವಾಗಿ ತಾನಾಗಿಯೇ ಕಡಿತಗೊಳ್ಳುವುದು ಈ ಮಾಪಕದ ವಿಶೇಷತೆಯಾಗಿದೆ. 

ಪ್ರೀಪೇಯ್ಡ್ ವಿದ್ಯುತ್ ಮಾಪಕದ ಬಗ್ಗೆ ಮಾತನಾಡಿರುವ ಶ್ರೀಕಾಂತ್ ಶರ್ಮ, ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ವಿದ್ಯುತ್ ಬಾಕಿಯನ್ನು ಪಾವತಿ ಮಾಡುವುದಿಲ್ಲ ಎಂಬ ಆರೋಪವನ್ನು ತೆಗೆದುಹಾಕುವುದಕ್ಕೆ ಈ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ. 

ಎಲ್ಲಾ ಸರ್ಕಾರಿ ಅಧಿಕಾರಿಗಳು, ಸಚಿವರು, ರಾಜಕಾರಣಿಗಳ ಮನೆಗಳಿಗೆ ಪ್ರೀಪೇಯ್ಡ್ ವಿದ್ಯುತ್ ಮೀಟರ್ ಗಳನ್ನು ಅಳವಡಿಸಬೇಕೆಂಬ ನಿರ್ಧಾರವನ್ನು ಅ.29 ರಂದು ಕೈಗೊಳ್ಳಲಾಗಿತ್ತು. ಈಗ ಸ್ವತಃ ಸಚಿವರು ಅಳವಡಿಸಿಕೊಂಡಿದ್ದು, ಜನರಿಗೂ ಪ್ರೀಪೇಯ್ಡ್ ಮೀಟರ್ ನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.

SCROLL FOR NEXT