ದೇಶ

ರಾಮಮಂದಿರ: ಸುಪ್ರೀಂ ತೀರ್ಪು ಪ್ರಶ್ನಿಸಿ ಮೇಲ್ಮನವಿಗೆ ನಿರ್ಧಾರ!

Srinivas Rao BV

ಲಖನೌ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದಕ್ಕೆ ಮತ್ತೊಂದು ಅಡ್ಡಿ ಎದುರಾಗಿದ್ದು,  ಕಳೆದ ವಾರ ರಾಮಲಲ್ಲಾನ ಪರವಾಗಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಲು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಿದೆ. 

ಉತ್ತರ ಪ್ರದೇಶದ ಲಖನೌ ನಲ್ಲಿ ನ.17 ರಂದು ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 

ಮಂಡಳಿಯ ನಿರ್ಧಾರದ ಬಗ್ಗೆ ಮಾಹಿತಿ ನೀಡಿರುವ ಅಖಿಲ ಭಾರತೀಯ ಮುಸ್ಲೀಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯದರ್ಶಿ ಜಫಾರ್ಯಾಬ್ ಜಿಲಾನಿ 5 ಎಕರೆ ಜಾಗ ನೀಡುವ ಸುಪ್ರೀಂ ಕೋರ್ಟ್ ನ ತೀರ್ಪು ನಮಗೆ ಸಮ್ಮತವಲ್ಲ. ಇಸ್ಲಾಮಿಕ್ ಕಾನೂನು ಶರಿಯತ್ ನ ಪ್ರಕಾರ ನಾವು ಮಸೀದಿ ನಿರ್ಮಿಸುವುದಕ್ಕೆ ಬೇರೆ ಯಾವುದೇ ಸ್ಥಳವನ್ನೂ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ನಮ್ಮ ಮೇಲ್ಮನವಿ ಶೇ.100ಕ್ಕೆ 100 ರಷ್ಟು ತಿರಸ್ಕೃತಗೊಳ್ಳುತ್ತದೆ. ಇದು ಗೊತ್ತಿದ್ದರೂ ನಾವು ಮೇಲ್ಮನವಿ ಸಲ್ಲಿಸುತ್ತೇವೆ ಇದು ನಮ್ಮ ಹಕ್ಕು ಎಂದು ಮೌಲಾನ ಅರ್ಶದ್ ಮದನಿ ಹೇಳಿದ್ದಾರೆ. 

SCROLL FOR NEXT