ದೇಶ

ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಿರ್ಗಮಿತ ಸಿಜೆಐ ರಂಜನ್ ಗೊಗೊಯ್ 

Nagaraja AB

ತಿರುಪತಿ: ಶತಮಾನಗಳಷ್ಟು ಹಳೆಯದಾದ ಅಯೋಧ್ಯೆ ವಿವಾದವನ್ನು ಇತ್ಯರ್ಥಗೊಳಿಸುವ ಮೂಲಕ ದೇಶಾದ್ಯಂತ ಜನಮನ್ನಣೆಗೆ ಪಾತ್ರರಾಗಿರುವ ಸುಪ್ರೀಂಕೋರ್ಟಿನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಇಂದು ಇಲ್ಲಿನ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ರಂಜನ್ ಗೊಗೊಯ್ ಹಾಗೂ ಅವರ ಪತ್ನಿ ರೂಪಾಂಜಲಿ ಗೊಗೊಯ್ ಪ್ರಸಿದ್ಧ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾಗಿ ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸಾಂಪ್ರಾದಾಯಿಕ ದಿರಿಸಿನಲ್ಲಿ ಆಗಮಿಸಿದ ರಂಜನ್ ಗೊಗೊಯ್ ದಂಪತಿಯನ್ನು ದೇವಾಲಯದ ಮುಖ್ಯ ಆರ್ಚಕರು ಸ್ವಾಗತಿಸಿದ್ದಾರೆ.ದೇವಾಲಯದಲ್ಲಿ  ಪೂಜೆ ಸಲ್ಲಿಸಿದ ಬಳಿಕ ನವದೆಹಲಿಗೆ ವಾಪಾಸ್ ಆಗಿದ್ದಾರೆ. 

ತಿರುಚನೂರು ಬಳಿಯ ಪದ್ಮಾವತಿ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಶಬರಿಮಲೆ ವಿವಾದ, ರಫೇಲ್ ಒಪ್ಪಂದ ಕುರಿತು ಮರು ಪರಿಶೀಲನಾ ಅರ್ಜಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಿರುವ ರಂಜನ್ ಗೊಗೊಯ್ ಇಂದು ಸೇವೆಯಿಂದ ನಿವೃತ್ತಿಯಾಗಿದ್ದಾರೆ. 

SCROLL FOR NEXT