ಸಂಸದ ಗಂಭೀರ್ ಕಾಣೆಯಾಗಿದ್ದಾರೆ ಎಂದು ಸಾರುವ ಪೋಸ್ಟರ್ 
ದೇಶ

ದೆಹಲಿ ಸಂಸದ ಗೌತಮ್ ಗಂಭೀರ್ ‘ಕಾಣೆಯಾಗಿದ್ದಾರೆ’!

ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯದ ಬಿಕ್ಕಟ್ಟು ದಿನೇದಿನೇ ಬಿಗಡಾಯಿಸುತ್ತಿದ್ದು ಈ ಕುರಿತು ಸಂಸದೀಯ ಸಮಿತಿಯ ಪ್ರಮುಖ ಸಭೆ ಇತ್ತೀಚಿಗೆ ನಡೆದಿದೆ. ಆದರೆ ಈ ಸಭೆಗೆ ಗೈರಾಗಿದ್ದ ಪೂರ್ವ ದೆಹಲಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಾಣೆಯಾಗಿದ್ದಾರೆ" ಎಂಬ ಪೋಸ್ಟರ್ ಗಳು ದೆಹಲಿ ಸುತ್ತಲೂ ಕಾಣಿಸಿಕೊಂಡಿದೆ.. ಭಾನುವಾರ ದೆಹಲಿಯ ಐಟಿಒ ಪ್ರದೇಶದಲ್ಲಿ ಈ ಪೋಸ್ಟರ್ ಗಳು...

ನವದೆಹಲಿ: ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯದ ಬಿಕ್ಕಟ್ಟು ದಿನೇದಿನೇ ಬಿಗಡಾಯಿಸುತ್ತಿದ್ದು ಈ ಕುರಿತು ಸಂಸದೀಯ ಸಮಿತಿಯ ಪ್ರಮುಖ ಸಭೆ ಇತ್ತೀಚಿಗೆ ನಡೆದಿದೆ. ಆದರೆ ಈ ಸಭೆಗೆ ಗೈರಾಗಿದ್ದ ಪೂರ್ವ ದೆಹಲಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಾಣೆಯಾಗಿದ್ದಾರೆ" ಎಂಬ ಪೋಸ್ಟರ್ ಗಳು ದೆಹಲಿ ಸುತ್ತಲೂ ಕಾಣಿಸಿಕೊಂಡಿದೆ.. ಭಾನುವಾರ ದೆಹಲಿಯ ಐಟಿಒ ಪ್ರದೇಶದಲ್ಲಿ ಈ ಪೋಸ್ಟರ್ ಗಳು ಪತ್ತೆಯಾಗಿದೆ.

"ನೀವಿವರನ್ನು ಕಂಡಿದ್ದಿರೆ?  ಇಂದೋರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅವರು ಜಿಲೇಬಿ ಸೇವಿಸುತ್ತಿದ್ದಾಗ ಕಡೆಯದಾಗಿ ಕಾಣಿಸಿಕೊಂಡಿದ್ದಾರೆ" ಎಂಬ ಒಕಣೆ ಜತೆಗೆ ಗೌತಮ್ ಗಂಭೀರ್ ಚಿತ್ರವಿರುವ ಪೋಸ್ಟರ್ ಇದೀಗ ದೆಹಲಿಯ ನಾನಾ ಕಡೆ ರಾರಾಜಿಸಿದೆ.

ಭಾರತ, ಬಾಂಗ್ಲಾದೇಶ ಕ್ರಿಕೆಟ್ ಪಂದ್ಯದ ಕಮೆಂಟರಿಯನ್ ಆಗಿದ್ದ ದೆಹಲಿ ಸಂಸದನ ವಿರುದ್ಧ  ಆಮ್ ಆದ್ಮಿ ಪಕ್ಷ (ಎಎಪಿ) ತೀವ್ರ ವಾಗ್ದಾಳಿ ನಡೆಸಿತು.

ಭಾರತದ ಮಾಜಿ ಕ್ರಿಕೆಟಿಗ ವಿ ವಿ ಎಸ್ ಲಕ್ಷ್ಮಣ್ ಅವರು ಶುಕ್ರವಾರ ಹಂಚಿಕೊಂಡ ಫೋಟೋವೊಂದರಲ್ಲಿ ಅವರು ಮತ್ತು ಗಂಭೀರ್ ಜತೆಯಾಗಿ ಜಿಲೇಬಿ ಸೇವಿಸುತ್ತಿದ್ದರು. ಇದು ಎಎಪಿ ಕೆಂಗಣ್ಣಿಗೆ ಗುರಿಯಾಗಿದೆ. "ನಮ್ಮ ಗೌರವಾನ್ವಿತ ಸಂಸದರು ಜೀವನವನ್ನೇ ನಡುಗಿಸುವ ವಾಯುಮಾಲಿನ್ಯದ ಕುರಿತು ಸಭೆಗೆ ಗೈರಾಗಿದ್ದಾರೆ. ಅದೇ ಅವರು ತಮ್ಮ ಕ್ಷೇತ್ರಕ್ಕೆ ಸಂಸದರಾಗಿ ತಮ್ಮ ಸಂಬಳ ನೀಡುವುದಾಗಿ  ಪ್ರತಿಜ್ಞೆ ಮಾಡುತ್ತಾರೆ ಇದಕ್ಕೆ ವಿವರಣೆ ನಿಡಲಾಗದೆ"  ಎಎಪಿಯ ಅತೀಶಿ ಮರ್ಲೆನಾ ಟ್ವಿಟ್ಟರ್ ನಲ್ಲಿ ಆರೋಪಿಸಿದ್ದಾರೆ.

ಗಂಭೀರ್ ಈ ಮುನ್ನ ಟ್ವೀಟ್ ಮಾಡಿ " ನನ್ನ ಅವಹೇಳನ ಮಾಡಿದಾಕ್ಷಣ ದೆಹಲಿ ಮಾಲಿನ್ಯ ಕಡಿಮೆಯಾಗುವುದಾದರೆ ಎಎಪಿ ನನ್ನನ್ನು ನಿಂದಿಸಲಿ" ಎಂದಿದ್ದರು. "ನಾನು ಹಣ ಸಂಪಾದನೆಗಾಗಿ ರಾಜಕೀಯಕ್ಕೆ ಬಮ್ದವನಲ್ಲ, ಆದರೆ ನನ್ನ ಬೆಂಬಲಕ್ಕೆ ನಾನು ಕುಟುಂಬವನ್ನು ಹೊಂದಿರುವೆ. ನೆ. ನಾನು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನಂಬಿದ್ದೇನೆ ಮತ್ತು ಮುಂದಿನ ರಾಜಕೀಯ ಜೀವನಕ್ಕಾಗಿ ಸಾರ್ವಜನಿಕರ ಹಣ ಬಳಸುವುದಿಲ್ಲ. ನನ್ನ ಕಮರ್ಷಿಯಲ್ ಎಂಗೇಜ್ ಮೆಂಟ್ ಗಳನ್ನು ಟೀಕಿಸುವುದು  ಪ್ರಾಮಾಣಿಕ ಜನರನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಪಕ್ಷವು ಮಾಡಬಹುದಾದ ಅತ್ಯಂತ ಕೀಳು ಸಂಗತಿಯಾಗಿದೆ " ಅವರು ಹೇಳಿದ್ದಾರೆ.

ಸಭೆಯಿಂದ ಗಂಭೀರ್ ಮಾತ್ರ ದೂರೌಳಿದಿಲ್ಲ, ಡಿಡಿಎ ಉಪಾಧ್ಯಕ್ಷ ತರುಣ್ ಕಪೂರ್ ಮತ್ತು ಮೂವರು ಎಂಸಿಡಿ ಆಯುಕ್ತರು ಇತರ ನಾಯಕರು ಸಹ ಗೈರಾಗಿದ್ದರು. . 29 ಸದಸ್ಯರ ಸಮಿತಿಯ ನಾಲ್ವರು ಸಂಸತ್ ಸದಸ್ಯರಲ್ಲಿ ಎಎಪಿಯ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಕೂಡ ಸೇರಿದ್ದಾರೆ. ಸಂಸತ್ತಿನ ಅನೆಕ್ಸ್‌ನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕೋರಿ ಲೋಕಸಭಾ ಸಚಿವಾಲಯವು ಸದಸ್ಯರು ಮತ್ತು ಅಧಿಕಾರಿಗಳಿಗೆ ನವೆಂಬರ್ 8 ರಂದು ನೋಟಿಸ್ ಕಳುಹಿಸಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT