ದೇಶ

ಕಪ್ಪುಹಣದ ಮೇಲೆ  ಮತ್ತೊಮ್ಮೆ ಗುರಿ;  ಆಸ್ತಿಗಳಿಗೆ  ಆಧಾರ್  ಕಡ್ಡಾಯಗೊಳಿಸಲು  ಮೋದಿ ಸರ್ಕಾರದ ಸಿದ್ದತೆ

Srinivas Rao BV

ನವದೆಹಲಿ: ನ ಖಾವೋಂಗಾ ..  ನ ಖಾನೆ ದೋಂಗಾ( ನಾನು ಭ್ರಷ್ಟಾಚಾರ ಮಾಡುವುದಿಲ್ಲ ...  ಭ್ರಷ್ಟಾಚಾರ ನಡೆಸಲು  ಯಾರನ್ನೂ ಬಿಡುವುದಿಲ್ಲ) ಎಂದು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣದ ಮೇಲೆ  ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ಗೆ ಸಿದ್ಧತೆ ನಡೆಸಿದ್ದಾರೆ. 
 
ಅಡಗಿಸಿಟ್ಟಿರುವ ಕಪ್ಪುಹಣ ಹೊರಗೆ ತರಲು ಸಾಧ್ಯವಾಗುವಂತೆ ತಮ್ಮ ಅಧಿಕಾರಾವಧಿಯ ಮೊದಲ ಐದು ವರ್ಷಗಳಲ್ಲಿ ಹಲವು  ಪ್ರಮುಖ ಕಾನೂನು ಜಾರಿಗೊಳಿಸಿದ ಅವರು, ಈಗ ಆಸ್ತಿಗಳಿಗೂ 'ಆಧಾರ್ ಲಿಂಕ್ ಎಂಬ ಮತ್ತೊಂದು ದೈತ್ಯ ಆಯುಧ  ಪ್ರಯೋಗಿಸಲು ಮುಂದಾಗಿದ್ದಾರೆ. ಅಂದರೆ, ಎಲ್ಲಾ ಸ್ವತ್ತುಗಳನ್ನು ಆಧಾರ್ ನೊಂದಿಗೆ ಜೋಡಿಸುವುದು..! ವಿಶ್ವಾಸಾರ್ಹ ಮೂಲಗಳ ಪ್ರಕಾರ, ಈ ಸಂಬಂಧ ಕೇಂದ್ರ ಸರ್ಕಾರ ರೂಪಿಸುತ್ತಿರುವ ವಿಧೇಯಕ ಅಂತಿಮ ಹಂತದಲ್ಲಿದೆ. ಕಪ್ಪು ಹಣ ನಗದು ರೂಪದಲ್ಲಿರದೆ. ಹೂಡಿಕೆಯಾಗಿ ಬದಲಾಗುತ್ತಾ ರಿಯಲ್ಎಸ್ಟೇಟ್ ಕ್ಷೇತ್ರಕ್ಕೆ ಪ್ರವಹಿಸುತ್ತಿದೆ. ದೇಶಾದ್ಯಂತ ಇದೇ ರೀತಿಯ ಪರಿಸ್ಥಿತಿಯಿದ್ದು, ಇದರಿಂದ ನಿವೇಶನ, ಮನೆಗಳ ಬೆಲೆಗಳ ಗಗನಕ್ಕೇರುತ್ತಿವೆ. ಇದರಿಂದ  ಬಡವರು,ಮಧ್ಯಮ ವರ್ಗದವವರು  ನಿವೇಶನ  ಮನೆ ಖರೀದಿಸಲು ಸಾಧ್ಯವಾಗತಂತಹ  ಪರಿಸ್ಥಿತಿ  ಕಾರಣವಾಗುತ್ತಿದೆ. 

ಈ ಎರಡು ಸಮಸ್ಯೆಗಳಗೆ  ಏಕಕಾಲದಲ್ಲಿ  ಬಗೆಹರಿಸಿ  ಪರಿಹಾರ ರೂಪಿಸಲು    ಪ್ರಧಾನಿ  ನರೇಂದ್ರ ಮೋದಿ  ಸರ್ಕಾರ ಕ್ರಮಗಳನ್ನು ಪ್ರಾರಂಭಿಸಿದೆ. ಇದರಿಂದ ಕಪ್ಪು ಹಣ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ   ಹರಿದುಬಂದು  ಕೈಗಳಿಂದ ಕೈಗಳಿಗೆ  ಬದಲಾಗುವುದಕ್ಕೆ ತಡೆಯೊಡ್ಡಲಿದೆ.

SCROLL FOR NEXT