ಸಿಯಾಚಿನ್ 
ದೇಶ

ಸಿಯಾಚಿನ್ ನಲ್ಲಿ ಭಾರಿ ಹಿಮಪಾತ: ಹಿಮದಡಿಯಲ್ಲಿ ಸಿಲುಕಿದ 8 ಸೈನಿಕರು

ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್ ನಲ್ಲಿ ಸೇನಾ ಶಿಬಿರದ ಮೇಲೆ ಭಾರೀ ಹಿಮಪಾತವಾಗಿದ್ದು,  8 ಸೈನಿಕರು ಕಣ್ಮರೆಯಾಗಿರುವ ಸಂಗತಿ ತಿಳಿದುಬಂದಿದೆ.

ನವದೆಹಲಿ: ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್ ನಲ್ಲಿ ಸೇನಾ ಶಿಬಿರದ ಮೇಲೆ ಭಾರೀ ಹಿಮಪಾತವಾಗಿದ್ದು,  8 ಸೈನಿಕರು ಕಣ್ಮರೆಯಾಗಿರುವ ಸಂಗತಿ ತಿಳಿದುಬಂದಿದೆ.

ಸಿಯಾಚಿನ್ ಪ್ರದೇಶದಲ್ಲಿ ಗಸ್ತು ತಿರುಗುತ್ತದ್ದ 8 ಮಂದಿ ಸೈನಿಕರು ನಾಪತ್ತೆಯಾಗಿದ್ದಾರೆ. ಭಾರಿ ಹಿಮಪಾತದಲ್ಲಿ ಅವರು ಸಿಲುಕಿರುವ ಸಾಧ್ಯತೆ ಇದ್ದು,  ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
 
18 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಹಿಮಪಾತವಾಗಿದೆ. ಇದರಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ. ನಾಪತ್ತೆಯಾದ ಸೈನಿಕರಿಗಾಗಿ ಹುಡುಕಾಟ ತೀವ್ರಗೊಳಿಸಲಾಗಿದೆ ಎಂದು ಹೇಳಲಾಗಿದೆ. 

ಹಿಮಾಲಯದ ಉತ್ತರ ತುದಿಯಲ್ಲಿ ಲಡಾಕ್ ವ್ಯಾಪ್ತಿಯಲ್ಲಿರುವ ಈ ಪ್ರದೇಶ ಸಮುದ್ರ ಮಟ್ಟದಿಂದ ಸುಮಾರು 22 ಸಾವಿರ ಅಡಿ ಎತ್ತರದಲ್ಲಿದ್ದು, 1984ರಿಂದ ಈವರೆಗೂ ಭಾರತ ಮತ್ತು ಪಾಕಿಸ್ತಾನದ ಅನೇಕ ಯೋಧರನ್ನು ಹಿಮಪಾತ ಬಲಿತೆಗೆದುಕೊಂಡಿದೆ. 

2016ರಲ್ಲಿ ಸಂಭವಿಸಿದ್ದ ಹಿಮಪಾತದಲ್ಲಿ 10 ಜನ ಯೋಧರು ಮೃತಪಟ್ಟಿದ್ದರು. 25 ಅಡಿ ಆಳದಲ್ಲಿ ಹಿಮದಡಿ ಸಿಲುಕಿದ್ದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಅವರನ್ನು ಆರು ದಿನಗಳ ಬಳಿಕ ಕಾರ್ಯಾಚರಣೆ ಬಳಿಕ  ರಕ್ಷಿಸಲಾಗಿತ್ತು. ಆದರೆ, ಅವರು ಬಳಿಕ ಮೃತಪಟ್ಟಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಜೂನ್ 3ರಂದು ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಲೋಕಭವನದಲ್ಲಿ ಪ್ರಮಾಣವಚನ!

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಭಾರೀ ಅಗ್ನಿ ಅವಘಡ; ಹೊತ್ತಿ ಉರಿದ ಇಡೀ ಕಟ್ಟಡ!

ಪರಮಾಣು ದಾಳಿಯಿಂದ ರಕ್ಷಣೆ, ಪ್ರತಿದಾಳಿಗೆ ಚೀನಾ ಮಾಸ್ಟರ್ ಪ್ಲಾನ್: ಸೈಲೋಗಳ ಸಮೀಪ ಲಾಂಚ್ ಪ್ಯಾಡ್ ಗಳ ನಿರ್ಮಾಣ! ಉಪಗ್ರಹ ಚಿತ್ರಗಳಲ್ಲಿ ಬಹಿರಂಗ

ಜೂನ್‌ನಲ್ಲಿ ಸಂಪುಟ ಪುನಾರಚನೆ: ಡಜನ್‌ಗೂ ಹೆಚ್ಚು ಸಚಿವರಿಗೆ ಕೊಕ್; ಕೇಂದ್ರ ಸಚಿವರೊಬ್ಬರಿಗೆ ಕರ್ನಾಟಕ BJP ಅಧ್ಯಕ್ಷ ಹುದ್ದೆ!

IPL 2026: 'ಪ್ಲೇ ಆಫ್ ಗೆ ಅರ್ಹತೆ ಪಡೆಯುವ ಸಾಧ್ಯತೆಯೇ ಇರಲಿಲ್ಲ, ಆದ್ರೆ..': ವೈಭವ್ ಸೂರ್ಯವಂಶಿ ಕುರಿತು RR ನಾಯಕ ರಿಯಾನ್ ಪರಾಗ್ ದೊಡ್ಡ ಹೇಳಿಕೆ!

SCROLL FOR NEXT