ದೇಶ

ಕಾಶ್ಮೀರದಲ್ಲಿ ಶೀಘ್ರ ಹೂಡಿಕೆದಾರರ ಶೃಂಗಸಭೆ: ಮುರ್ಮು

Srinivas Rao BV

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯೇತರ ಹೂಡಿಕೆಯನ್ನು ಹೆಚ್ಚಿಸಲು ಹಾಗೂ ಜನರಿಗೆ ಉದ್ಯೋಗ ಒದಗಿಸಲು ಸರ್ಕಾರ ಶೀಘ್ರದಲ್ಲೇ 'ಹೂಡಿಕೆದಾರರ ಶೃಂಗಸಭೆ' ಆಯೋಜಿಸಲಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮು ಸೋಮವಾರ ಹೇಳಿದ್ದಾರೆ.

ಈ ನಡುವೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ 40,000 ಸಾವಿರ ಜನರಿಗೆ, ಯುವಕರಿಗೆ ಶಿಕ್ಷಣ ನೀಡಿ ಉದ್ಯೋಗವೂ ದೊರಕುವಂತೆ ಮಾಡಲಾಗುವುದು  ಎಂದರು. ಮಧ್ಯ ಕಾಶ್ಮೀರ ಜಿಲ್ಲೆಯ ಗ್ಯಾಂಡರ್‌ಬಾಲ್‌ನಲ್ಲಿ ನಡೆದ ಪೊಲೀಸ್ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚು ಬಂಡವಾಳ  ಹೂಡಿಕೆ ಬಯಸುತ್ತೇವೆ, ಇದಕ್ಕಾಗಿ ಈಗಾಗಲೇ ಹೂಡಿಕೆದಾರರ ಶೃಂಗಸಭೆಯನ್ನು ಆಯೋಜಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಇದು ಕಣಿವೆಯಲ್ಲಿ ಪರಿಸ್ಥಿತಿ ಸಾಮಾನ್ಯಸ್ಥಿತಿಗೆ ಮರಳಿದ ನಂತರ ಹೂಡಿಕೆದಾರರ ಸಭೆ ನಡೆಯಲಿದೆ. 
 

SCROLL FOR NEXT