ದೇಶ

ಸುಪ್ರೀಂ ಕೋರ್ಟ್ ನ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಾಧೀಶ ಎಸ್ ಎ ಬೊಬ್ಡೆ ಪದಗ್ರಹಣ 

Sumana Upadhyaya

ನವದೆಹಲಿ: ಸುಪ್ರೀಂ ಕೋರ್ಟ್ ನ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೋಮವಾರ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಪ್ರಮಾಣವಚನ ಸ್ವೀಕರಿಸಿದರು.


ರಾಷ್ಟ್ರಪತಿ ರಾಮನಾಥ್ ಕೋವಿಂದ್ ನ್ಯಾಯಮೂರ್ತಿ ಬೊಬ್ಡೆ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.


ಶರದ ಅರವಿಂದ್ ಬೊಬ್ಡೆ ಅವರು, ನಿನ್ನೆ ನಿವೃತ್ತರಾದ ರಂಜನ್ ಗೊಗೊಯಿ ಅವರ ಉತ್ತರಾಧಿಕಾರಿಯಾಗಿದ್ದಾರೆ. ನ್ಯಾಯಮೂರ್ತಿ ಬೊಬ್ಡೆ ಅವರು ಅಯೋಧ್ಯೆ ಸೇರಿದಂತೆ ಹಲವು ಮಹತ್ವದ ಪ್ರಕರಣಗಳಲ್ಲಿ ತೀರ್ಪು ನೀಡಿದ್ದಾರೆ. ಇಂದಿನಿಂದ 17 ತಿಂಗಳವರೆಗೆ ಅವರು ಅಧಿಕಾರದಲ್ಲಿ ಇರಲಿದ್ದಾರೆ. 2021ರ ಏಪ್ರಿಲ್ 23ರಂದು ಅವರು ನಿವೃತ್ತರಾಗಲಿದ್ದಾರೆ.

#WATCH Delhi: Justice Sharad Arvind Bobde takes oath as the 47th Chief Justice of India. He succeeds Justice Ranjan Gogoi. pic.twitter.com/Spb5Eys5KS

SCROLL FOR NEXT