ದೇಶ

ರಾಜ್ಯಸಭೆ ಕಲಾಪ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ 

Sumana Upadhyaya

ನವದೆಹಲಿ: ಸಂಸತ್ತಿನ ಚಳಿಗಾಲ ಅಧಿವೇಶನದ ಮೊದಲ ದಿನವಾದ ಸೋಮವಾರ ರಾಜ್ಯಸಭಾ ಕಲಾಪ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.


ಇಂದು ಬೆಳಗ್ಗೆ ಸಂಸತ್ತಿನ ಉಭಯ ಸದನಗಳ ಕಲಾಪ ಆರಂಭವಾಗಿದ್ದು ಎರಡೂ ಸದನಗಳಲ್ಲಿ ಅಗಲಿದ ಹಾಲಿ ಮತ್ತು ಮಾಜಿ ಸಂಸದರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತು ರಾಮ್ ಜೇಠ್ಮಲಾನಿ ಅವರಿಗೆ ಗೌರವ ನಮನ ಸಲ್ಲಿಸಿತು. ನಂತರ ರಾಜ್ಯ ಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.


ನಾಗರಿಕ(ತಿದ್ದುಪಡಿ) ಮಸೂದೆ 2019 ಸೇರಿದಂತೆ ಹಲವು ಮಸೂದೆಗಳು ಈ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಖಾಸಗಿ ದತ್ತಾಂಶ ರಕ್ಷಣಾ ಮಸೂದೆ 2019, ಮ್ಯಾರಿಟೈಮ್ ಪೈರಸಿ ವಿರೋಧಿ ಮಸೂದೆ 2019 ಮತ್ತು ಲಿಂಗಾಯತ ವ್ಯಕ್ತಿಗಳು (ಹಕ್ಕುಗಳ ರಕ್ಷಣೆ) ಮಸೂದೆ, 2019 ಕೂಡ ಮಂಡನೆಯಾಗುವ ನಿರೀಕ್ಷೆಯಿದೆ.

SCROLL FOR NEXT