ದೇಶ

12ರ ಬಾಲಕಿಗೆ ಅಯ್ಯಪ್ಪ ದರ್ಶನಕ್ಕೆ ನಿರಾಕರಣೆ

Raghavendra Adiga

ಶಬರಿಮಲೆ: ತನ್ನ ತಂದೆಯೊಂದಿಗೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಆಗಮಿಸಿದ್ದ ಪುದುಚೇರಿಯ 12 ವರ್ಷದ ಬಾಲಕಿಯನ್ನು ಪೋಲೀಸರು ಮಾರ್ಗಮಧ್ಯೆಯೇ ತಡೆದು ಹಿಂದೆ ಕಳಿಸಿದ್ದಾರೆ.ಬಾಲಕಿ ಮಂಗಳವಾರ ಬೆಳಿಗ್ಗೆ ಪಂಪಾ ಸಮೀಪಿಸಿದಾಗ ಪೋಲೀಸರು ಆಕೆಯನ್ನು ತಡೆಇದ್ದು ಆಕೆಗೆ ದೇವರ ದರ್ಶನಕ್ಕೆ ಅವಕಾಶ ನೀಡಿಲ್ಲ.

ವರ್ಚುವಲ್ ಕ್ಯೂ ಬುಕಿಂಗ್‌ನಲ್ಲಿ "ಇರುಮುಡಿಕಟ್ಟು"ವಿನಲ್ಲಿ ಬಾಲಕಿಯ ವಯಸ್ಸು 10 ವರ್ಷವೆಂದು ನಮೂದಾಗಿತ್ತು.ಮಹಿಳಾ ಪೊಲೀಸರು ಬಾಲಕಿಯ ಆಧಾರ್ ಕಾರ್ಡ್ ಪರಿಶೀಲಿಸಿದಾಗ, ಆಕೆಗೆ 12 ವರ್ಷ ಎಂದು ಪತ್ತೆಯಾಗಿದೆ.ಹಾಗಾಗಿ ಪಂಪಾದಿಂದ  ದೇಗುಲ ಸಂಕೀರ್ಣಕ್ಕೆ ಮುಂದುವರಿಯಲು ಬಾಲಕಿಗೆ ಅವಕಾಶ ನಿರಾಕರಿಸಲಾಗಿದೆ.ಎಂದು ಪೋಲೀಸರು ತಿಳಿಸಿದ್ದಾರೆ.

ಆದರೆ ಬಾಲಕಿಯ ಜತೆ ಬಂದಿದ್ದ ಕುಟುಂಬಿಕರಿಗೆ ಶಬರಿಮಲೆಯ ಸಧ್ಯದ ಪರಿಸ್ಥಿತಿ ಬಗೆಗೆ ತಿಳಿಸಿದ ಬಳಿಕ ಅವರಿಗೆ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಇನ್ನು ಸೋಮವಾರ ನಡೆದ ಘಟನೆಯಲ್ಲಿ ಕರ್ನಾಟಕದಿಂದ ಆಗಮಿಸಿದ್ದ ಕೇರಳ ಮೂಲದ ಒಂಬತ್ತು ವರ್ಷದ ಬಾಲಕಿಯ ಕತ್ತಿಗೆ ಒಂದು ಫಲಕ ನೇತುಹಾಕಿದ್ದು ಕಂಡುಬಂದಿದೆ. ಆ ಫಲಕದಲ್ಲಿ "ಕಾಯಲು ಸಿದ್ಧ. 50 ವರ್ಷಗಳನ್ನು ಪೂರೈಸಿದ ನಂತರ ದೇವಾಲಯಕ್ಕೆ ಭೇಟಿ ನೀಡುತ್ತೇನೆ"  ಎಂದು ಬರೆಯಲಾಗಿದೆ.

ಇನ್ನು ತ್ರಿಶೂರ್‌ನಿಂದ ಆಗಮಿಸಿದ್ದ ಹೃದ್ಯಕೃಷ್ಣನ್ ಎಂಬ ಮಹಿಳೆ ತಾವು ಮೂರು ಬಾರಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಇದ್ದು ಹೌದು. ಆದರೆ 50 ವರ್ಷಗಳಾದ ನಂತರವೇ ನಾನು ಶಬರಿಮಲೆಗೆ ಆಗಮಿಸಿದ್ದೇನೆ ಎಂದು ಹೇಳಿದ್ದಾರೆ.ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ರಕ್ಷಿಸುವವರು ಭಕ್ತರು ಎಂದು ಆಕೆಯ ತಂದೆ ಹರಿಕೃಷ್ಣನ್ ಹೇಳಿದ್ದಾರೆ.

10-50 ವರ್ಷ ವಯಸ್ಸಿನ ಇಬ್ಬರು ಮಹಿಳೆಯರನ್ನು ಸೋಮವಾರ ಬೆಟ್ಟದ ದೇಗುಲಕ್ಕೆ ಭೇಟಿ ನೀಡುವುದನ್ನು ಪೊಲೀಸರು ತಡೆದಿದ್ದರೆ, ಶನಿವಾರ ದೇವಾಲಯ ತೆರೆದಾಗ, ಆಂಧ್ರಪ್ರದೇಶದ ಕನಿಷ್ಠ 10 ಯುವತಿಯರನ್ನು ವಾಪಸ್ ಕಳುಹಿಸಲಾಗಿದೆ.

SCROLL FOR NEXT