ದೇಶ

ಎಐಎಂಐಎಂ ಬಿಜೆಪಿಯಿಂದ ಹಣಪಡೆದು ಉಗ್ರವಾದ ಹರಡುತ್ತಿದೆ: ಮಮತಾ  ಆರೋಪಕ್ಕೆ ಒವೈಸಿ ತಿರುಗೇಟು

Raghavendra Adiga

ಕೋಚ್ ಬಿಹಾರ್(ಪಶ್ಚಿಮ ಬಂಗಾಳ): ಹೈದರಾಬಾದ್ ನಲ್ಲಿ ನೆಲೆಯೂರಿರುವ ಅಲ್ಪಸಂಖ್ಯಾತರಲ್ಲಿ ಉಗ್ರವಾದದ ಬೇರುಗಳು ಗಟ್ಟಿಯಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೆಸರು ಉಲ್ಲೇಖಿಸದೆ ಮಮತಾ ಈ ಮಾತುಗಳನ್ನು ಹೇಳಿದ್ದಾರೆ.

ಕೋಚ್ ಬಿಹಾರ್ ನಲ್ಲಿ ಸೋಮವಾರ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, "ಹಿಂದೂಗಳಲ್ಲಿ ಉಗ್ರಗಾಮಿಗಳು ಇರುವಂತೆಯೇ ಅಲ್ಪಸಂಖ್ಯಾತರಲ್ಲಿ ಉಗ್ರವಾದವು ಪ್ರಾರಂಭಗೊಳ್ಳುತ್ತಿದೆ. ಹೈದರಾಬಾದ್ ಮೂಲದವರು ಈ ಕೆಲಸ ಮಾದುತ್ತಿದ್ದು ಅವರದೇ ಆದ ರಾಜಕೀಯ ಪಖ್ಷವನ್ನ ಅವರು ಹೊಂದಿದ್ದಾರೆ. ಮತ್ತು ಅವರು ಬಿಜೆಪಿಯಿಂದ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ," ಅವರು ಆರೋಪಿಸಿದ್ದಾರೆ.

ಈ ಆರೋಪಗಳಿಗೆ ಪ್ರತಿಕ್ರಯಿಸಿದ ಒವೈಸಿ, "ನನ್ನ ವಿರುದ್ಧ ಇಂತಹ ಆರೋಪಗಳನ್ನು ಮಾಡುವ ಮೂಲಕ ನೀವು ಬಂಗಾಳದ ಮುಸ್ಲಿಮರಿಗೆ ಸಂದೇಶವನ್ನು ನೀಡುತ್ತಿರುವಿರಿ, ಒವೈಸಿ ಪಕ್ಷ ರಾಜ್ಯದಲ್ಲಿ ಅಸಾಧಾರಣ ಶಕ್ತಿಯಾಗಿ ಮಾರ್ಪಟ್ಟಿದೆ. ಹಾಗಾಗಿ ಮಮತಾ ಬ್ಯಾನರ್ಜಿ ಅವರಿಂದು ಇಂತಹಾ ಹತಾಶೆ, ಭಯವನ್ನು ಹೊರಹಾಕಿದ್ದಾರೆ.

"ಸಿಎಂ ಮಮತಾ ಅವರ ಈ ಹೇಳಿಕೆ ಆಕೆ ಭಯದಲ್ಲಿದ್ದುದನ್ನು ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿರುವುದು ಬಹಿರಂಗವಾಗಿದೆ. ಅವರ ಈ ಹೇಳಿಕೆಯಿಂದ ಪಶ್ಚಿಮ ಬಂಗಾಳದ ಮುಸ್ಲಿಮರನ್ನು ಕೀಳಾಗಿ ಕಾಣುವ ಅವರ ಮನೋಭಾವನೆ ಸಾಬೀತಾಗಿದೆ. ಅಧಿಕಾರವು ಟಿಎಂಸಿ ನಾಯಕರನ್ನು ಸೊಕ್ಕೇರುವಂತೆ ಮಾಡಿದೆ. ಅದಕ್ಕಾಗಿ ಆತ್ಮಾವಲೋಕನ ಮಾಡಿಕೊಳ್ಳಲೂ ಆಕೆ ಬಯಸುವುದಿಲ್ಲ" ಟೈಮ್ಸ್ ನೌ ಸಂದರ್ಶನದಲ್ಲಿ ಒವೈಸಿ ಹೇಳಿದ್ದಾರೆ

ಎಐಎಂಐಎಂ ಮುಖ್ಯಸ್ಥ ಈ ಕುರಿತು ಟ್ವೀಟ್ ಮಾಡಿದ್ದು "ಬಂಗಾಳದ ಮುಸ್ಲಿಮರು ದೇಶದ ಇತರೆಡೆಗೆ ಹೋಲಿಸಿದರೆ ಅತ್ಯಂತ ಕೆಟ್ಟ ಮಾನವ ಅಭಿವೃದ್ಧಿ ಸೂಚಕಗಳನ್ನು ಹೊಂದಿದ್ದಾರೆ ಎನ್ನುವುದು  ಧಾರ್ಮಿಕ ಉಗ್ರವಾದವಲ್ಲ " ಎಂದಿದ್ದಾರೆ

"ದೀದಿ (ಮಮತಾ ಬ್ಯಾನರ್ಜಿ) ಹೈದರಾಬಾದ್ ಕುರಿತು ಯೋಚಿಸಿದ್ದರೆ ಬಂಗಾಳದಲ್ಲಿ ಬಿಜೆಪಿ ಹೇಗೆ 18 ಲೋಕಸಭೆ ಸ್ಥಾನ ಗಳಿಸಿತು ಎಂಬುದನ್ನು ಮೊದಲು ಹೇಳಲಿ" ಒವೈಸಿ ಸವಾಲು ಹಾಕಿದ್ದಾರೆ.

SCROLL FOR NEXT