ದೇಶ

ಅಮೆರಿಕಾದಿಂದ ಗಡೀಪಾರಾದ 145 ಭಾರತೀಯರು ದೆಹಲಿಗೆ ಆಗಮನ

Raghavendra Adiga

ನವದೆಹಲಿ:  ಅಮೆರಿಕದಿಂದ ಗಡೀಪಾರು ಮಾಡಿದ 145 ಭಾರತೀಯರು, ಇಂದು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಗ್ಲಾದೇಶದ ಮೂಲಕ ವಿಶೇಷ ವಿಮಾನದ ಮೂಲಕ ಆಗಮಿಸಿದ್ದಾರೆ.

ಹೆಚ್ಚಾಗಿ ಅಕ್ರಮ ವಲಸಿಗರು ಮತ್ತು ವೀಸಾ ನಿಯಮಗಳನ್ನು ಉಲ್ಲಂಘಿಸಿದವರು. ಈ ವಿಮಾನದಲ್ಲಿ ಕೆಲವು ಬಾಂಗ್ಲಾದೇಶದ ನಾಗರಿಕರು ಸೇರಿದಂತೆ ದಕ್ಷಿಣ ಏಷ್ಯಾದ ಕೆಲವು ಪ್ರಜೆಗಳು ಇದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕಾಕ್ಕೆ ಅಕ್ರವಾಗಿ ನುಸುಳಿದ್ದರೆಂದು ಸ್ಥಳೀಯ ಅಂತರಾಷ್ಟ್ರೀಯ ಏಜೆಂತರ ಭರವಸೆ ಹಿನ್ನೆಲೆಯಲ್ಲಿ ಅಮೆರಿಕಾಗೆ ತೆರಳಿದ್ದವರ ಪೈಕಿ ಬಹುತೇಕ ಭಾರತೀಯರು ವೀಸಾ ನಿಯಮ ಉಲ್ಲಂಘಿಸಿದ್ದಾರೆ. ಅವಧಿ ಮುಗಿದರೂ ಅಮೆರಿಕಾದಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

"ವಿಮಾನದಲ್ಲಿ ಕೆಲ ಬಾಂಗ್ಲಾದೇಶೀಯರು, ಶ್ರೀಲಂಕಾ ಪ್ರಜೆಗಳಿದ್ದಾರೆ ಎಂಬ ಮಾಹಿತಿ ಇದೆ. ಗಡೀಪಾರಿಗೆ ಒಲಗಾದವರಲ್ಲಿ ಬಹುತೇಕ ಇಪ್ಪತ್ತರಿಂದ ಮೂವತ್ತೈದು ವರ್ಷ ವಯೋಮಾನದವರಾಗಿದ್ದು ಅವರೆಲ್ಲರಿಗೆ ತುರ್ತು ಪ್ರಮಾಣಪತ್ರ ನೀಡಿದ್ದು ಅದರ ನಿಯಮದಂತೆ ಎಲ್ಲರೂ ಅಮೆರಿಕಾದಿಂದ ಭಾರತ್ಕ್ಕೆ ಏಕಮುಖ ಸಂಚಾರಕ್ಕೆ ಅವರಿಗೆ ಅವಕಾಶವಿರಲಿದೆ" ಅವರು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಅ.23ರಂದು ಅಮೆರಿಕಾ 117 ಭಾರತೀಯರನ್ನು ಗಡೀಪಾರು ಮಾಡಿತ್ತು.

SCROLL FOR NEXT