ದೇಶ

ಚಂದ್ರಯಾನ-3ಗೆ ಇಸ್ರೊ ತಯಾರಿ: ನೀಲನಕ್ಷೆ ಸಿದ್ಧ

Sumana Upadhyaya

ನವದೆಹಲಿ: ಚಂದ್ರಯಾನ-2 ವೈಫಲ್ಯ ನಂತರ ಇಸ್ರೊ ಕೇಂದ್ರ ಚಂದ್ರಯಾನ-3 ಯೋಜನೆಗೆ ತಯಾರಿ ನಡೆಸಿದ್ದು, ಇದಕ್ಕಾಗಿ ನೀಲನಕ್ಷೆ ತಯಾರಿಸಿದೆ. 


ಚಂದ್ರನ ಶೋಧನೆ ಕಾರ್ಯಾಚರಣೆಗೆ ಇಸ್ರೊ ನೀಲನಕ್ಷೆ ತಯಾರಿಸಿದ್ದು ಅದಕ್ಕಾಗಿ ಅಗತ್ಯ ತಂತ್ರಜ್ಞಾನಗಳನ್ನು ರಚಿಸುತ್ತಿದೆ. ಈ ನೀಲನಕ್ಷೆಯನ್ನು ಅಂತರಿಕ್ಷ ಆಯೋಗಕ್ಕೆ ಸಲ್ಲಿಸಲಾಗಿದೆ. ಅಂತಿಮ ವಿಶ್ಲೇಷಣೆ ಮತ್ತು ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮುಂದಿನ ಚಂದ್ರನ ಪರಿಶೋಧನೆ ಕಾರ್ಯಾಚರಣೆಗೆ ಕೆಲಸ ಮುಂದುವರಿಯುತ್ತಿದೆ ಎಂದು ಅಣುಶಕ್ತಿ ಮತ್ತು ಅಂತರಿಕ್ಷ ಕೇಂದ್ರ ಇಲಾಖೆಯ ರಾಜ್ಯ ಇಲಾಖೆ ಸಚಿವ ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ನಿನ್ನೆ ರಾಜ್ಯಸಭೆಯಲ್ಲಿ ತಿಳಿಸಿದರು.


ಚಂದ್ರಯಾನ-2 ಯೋಜನೆಯ ವೈಫಲ್ಯಗಳನ್ನು ಸರಿಯಾಗಿ ವಿಶ್ಲೇಷಿಸಿ ಮುಂದಿನ ಸಾರಿ ಈ ತಪ್ಪುಗಳು ಮರುಕಳಿಸದಂತೆ ಚಂದ್ರಯಾನ-3 ಯೋಜನೆ ಯಶಸ್ವಿಯಾಗಲು ತಜ್ಞರುಗಳ ಸಮಿತಿ, ಸಂಘಟನೆಗಳು ಮತ್ತು ಹಿರಿಯ ವಿಜ್ಞಾನಿಗಳು ಸತತ ಕೆಲಸ ಮಾಡುತ್ತದೆ ಎಂದು ಇಸ್ರೊ ವಕ್ತಾರ ವಿವೇಕ್ ಸಿಂಗ್ ತಿಳಿಸಿದ್ದಾರೆ.

SCROLL FOR NEXT