ದೇಶ

'ಮಹಾ'ರಾಷ್ಟ್ರ ಸರ್ಕಾರ ರಚನೆ ಕಸರತ್ತು: ಮಧ್ಯರಾತ್ರಿಯಲ್ಲಿ ಶಿವಸೇನೆ-ಎನ್ ಸಿಪಿ ನಾಯಕರ ಭೇಟಿ; ತೀವ್ರ ಚರ್ಚೆ 

Sumana Upadhyaya

ಮುಂಬೈ: ಮಹಾರಾಷ್ಟ್ರ ರಾಜಕಾರಣದ ಮಹತ್ವದ ಬೆಳವಣಿಗೆಯಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಕಳೆದ ರಾತ್ರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.


ಪವಾರ್ ಅವರ ನಿವಾಸದಲ್ಲಿ ಒಂದು ಗಂಟೆಗೂ ಅಧಿಕ ಸಮಯ ನಡೆದ ಮಾತುಕತೆಯಲ್ಲಿ ಎನ್ ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸುವ ಪ್ರಯತ್ನವನ್ನು ಶಿವಸೇನೆ ನಾಯಕರು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.


ನಿನ್ನೆ ಶರದ್ ಪವಾರ್ ಅವರು ದೆಹಲಿಯಿಂದ ಆಗಮಿಸಿದ್ದರು. ಈ ಸಭೆಯ ವೇಳೆ ಸಂಜಯ್ ರಾವತ್ ಕೂಡ ಇದ್ದರು.ಆದರೆ ಕಾಂಗ್ರೆಸ್ ನ ಯಾವುದೇ ನಾಯಕರು ಇರಲಿಲ್ಲ. ಇದು ಉನ್ನತ ಮಟ್ಟದ ನಾಯಕರ ನಡುವಿನ ಮಾತುಕತೆಯಾಗಿದ್ದರಿಂದ ಅವರಿಗೆ ಮಾತ್ರ ಏನು ಮಾತುಕತೆ ನಡೆಯಿತು ಎಂದು ಗೊತ್ತಿದೆಯಷ್ಟೆ. ಸರ್ಕಾರ ರಚನೆ ಮಾಡಿ ಸ್ಥಾನಗಳ ಹಂಚಿಕೆ ಸಂಬಂಧ ಅಂತಿಮ ಘಟ್ಟದ ಮಾತುಕತೆ ನಡೆಸುವ ಸಂಬಂಧ ಈ ಮಾತುಕತೆಯಾಗಿರಬಹುದು ಎಂದು ಎನ್ ಸಿಪಿ ನಾಯಕರು ಹೇಳಿದ್ದಾರೆ.

SCROLL FOR NEXT