ದೇಶ

ಸೇನೆ ಜೊತೆಗೆ 'ಮಹಾ' ಸರ್ಕಾರ ರಚನೆಗೆ ಮಿತ್ರ ಪಕ್ಷಗಳು ಒಲವು-ಕಾಂಗ್ರೆಸ್ , ಎನ್ ಸಿಪಿ

Nagaraja AB

ಮುಂಬೈ: ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟು ಶಿವಸೇನೆ ಜೊತೆಗೆ ಸರ್ಕಾರ ರಚಿಸುವುದನ್ನು ತಮ್ಮ ಸಣ್ಣ ಮಿತ್ರ ಪಕ್ಷಗಳು ಒಲವು ವ್ಯಕ್ತಪಡಿಸಿವೆ ಎಂದು ಎನ್ ಸಿಪಿ ಹಾಗೂ ಕಾಂಗ್ರೆಸ್ ಹೇಳಿವೆ.

  ಚುನಾವಣಾ ಪೂರ್ವದಲ್ಲಿ ಮೈತ್ರಿ ಮಾಡಿಕೊಂಡಿದ್ದ ಸಮಾಜವಾದಿ ಪಕ್ಷ, ಆರ್ ಪಿಐ (ಕಾವಾಡೆ ಬಣ)  ಆರ್ ಪಿಐ( ಖರತ್ ಬಣ)ರಾಜು ಸೇಠಿ ನೇತೃತ್ವದ ಸ್ವಾಭಿಮಾನಿ ಪಕ್ಷ ಮತ್ತು ಪಿಡಬ್ಲ್ಯೂಪಿ, ಸಿಪಿಐ(ಎಂ) ಜನತಾ ದಳ ಮತ್ತಿತರ ಪಕ್ಷಗಳೊಂದಿಗೆ ಕಾಂಗ್ರೆಸ್ ಹಾಗೂ ಎನ್ ಸಿಪಿ ಪ್ರತಿನಿಧಿಗಳು ಇಂದು ಸಭೆ ನಡೆಸಿದರು.

ಸಭೆಯ ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಎನ್ ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್, ಬಿಜೆಪಿಯನ್ನು ದೂರವಿಟ್ಟು ಶಿವಸೇನೆ ಜೊತೆಗೆ ಸರ್ಕಾರ ರಚಿಸುವ ಚಿಂತನೆಯನ್ನು ನಮ್ಮ ಮಿತ್ರ ಪಕ್ಷಗಳು ಬೆಂಬಲ ನೀಡಿವೆ ಎಂದು ಸ್ಪಷ್ಟಪಡಿಸಿದರು. 

ಚುನಾವಣಾ ಫಲಿತಾಂಶ ಪ್ರಕಟವಾಗಿ ಸುಮಾರು 1 ತಿಂಗಳು ಆಗುತ್ತಿದ್ದರೂ ಸರ್ಕಾರ ಇನ್ನೂ ರಚನೆಯಾಗದ ಸಂದರ್ಭದಲ್ಲಿ ಕಾಂಗ್ರೆಸ್ -ಎನ್ ಸಿಪಿಯ ಸರ್ಕಾರ ರಚನೆಯ ಪ್ರಯತ್ನವನ್ನು ಸಣ್ಣ ಮಿತ್ರಪಕ್ಷಗಳ ಮುಖಂಡರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಂಬಂಧ ಕಾಂಗ್ರೆಸ್ ಹಾಗೂ ಎನ್ ಸಿಪಿ, ಶಿವಸೇನೆ ಜೊತೆಗೆ ಚರ್ಚೆ ನಡೆಸಲಿದೆ ಎಂದು ಹೇಳಿದರು. 

ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಕರಡನ್ನು ಮಿತ್ರ ಪಕ್ಷಗಳು ಸಿದ್ದಪಡಿಸಿದ್ದು, ಅವುಗಳನ್ನು ಮೂರು ಪಕ್ಷಗಳ ಉನ್ನತ ನಾಯಕರು ದೃಢಪಡಿಸಿದ್ದಾರೆ. ಅಂತಿಮ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳು ಉದ್ದೇಶಿತ ಸರ್ಕಾರದ ಕ್ರಮಗಳಿಗೆ ಮಾರ್ಗದರ್ಶನ ನೀಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಹೇಳಿದರು. 

ದೇಶದಲ್ಲಿನ ಕೋಮುವಾದವನ್ನು ಅಂತ್ಯಗೊಳಿಸಬೇಕಾಗಿದೆ. ಶಿವಸೇನೆ ತನ್ನ ಕೆಲವೊಂದು ಸಿದ್ದಾಂತಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಕೋಮುವಾದವನ್ನು ಅಳಿಸಿಹಾಕುವ ನಿಟ್ಟಿನಲ್ಲಿ ಸರ್ಕಾರ ರಚಿಸುತ್ತಿರುವುದಾಗಿ ಸಮಾಜವಾದಿ ಮುಖಂಡ ಅಬು ಅಜಿಂ ತಿಳಿಸಿದರು. 

ದಲಿತ, ಅಲ್ಪಸಂಖ್ಯಾತ, ರೈತ ಹಾಗೂ ದುರ್ಬಲ ವರ್ಗದವರ ಪರ ಸರ್ಕಾರ ಆದ್ಯತೆ ನೀಡಬೇಕಾಗುತ್ತದೆ ಎಂದು ಅಬು ಅಜಿಂ ಹೇಳಿದರು. 

SCROLL FOR NEXT