ದೇಶ

ಬಂಧಿತ ಕಾಶ್ಮೀರಿ ನಾಯಕು ಮನೆಗೆ ಭೇಟಿ ನೀಡಲು ಅವಕಾಶ, ಶೀಘ್ರ ಬಿಡುಗಡೆ ಸಾಧ್ಯತೆ

Lingaraj Badiger

ಶ್ರೀನಗರ: ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ವಶಕ್ಕೆ ಪಡೆಯಲಾಗಿದ್ದ ರಾಜಕೀಯ ನಾಯಕರಿಗೆ ಈಗ ಮನೆಗೆ ಭೇಟಿ ನೀಡಲು ಅವಕಾಶ ನೀಡಿದ್ದು, ಶೀಘ್ರದಲ್ಲೇ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಕಳೆದ ಆಗಸ್ಟ್ 5ರಿಂದ ಬಂಧನದಲ್ಲಿರುವ ರಾಜಕೀಯ ನಾಯಕರಿಗೆ ವಿಧಿಸಲಾಗಿದ್ದ ಹಲವು ಷರತ್ತುಗಳನ್ನು ಕೇಂದ್ರಾಡಳಿತ ಪ್ರದೇಶ ಸಡಿಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ರಾಜಕೀಯ ನಾಯಕರ ಪೈಕಿ ವಿವಿಧ ಪಕ್ಷದ ನಾಲ್ವರು ನಾಯಕರಿಗೆ ಅವರ ಮನವಿ ಮೇರೆಗೆ ಶನಿವಾರ ಕೆಲ ಗಂಟೆಗಳ ಕಾಲ ಅವರ ಮನೆಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಗೃಹ ಬಂಧನದಲ್ಲಿರುವ ಕೆಲವು ನಾಯಕರಿಗೆ ಕೆಲ ಕಾಲ ಹೊರಗಡೆ ತೆರಳಲು ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಂಧಿತ ಕೆಲ ನಾಯಕರನ್ನು ಎಂಎಲ್ಎ ಹಾಸ್ಟೆಲ್ ನಿಂದ ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಕೇಂದ್ರ ಮತ್ತು ಕೇಂದ್ರಾಡಳಿತ ಪ್ರದೇಶ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT