ದೇಶ

ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕೈಲಾಶ್ ಜೋಶಿ ನಿಧನ

Raghavendra Adiga

ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ಜೋಶಿ (90)ದೀರ್ಘಕಾಲದ ಅನಾರೋಗ್ಯದಿಂದ ಭೋಪಾಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.

ಅವರು ಭೋಪಾಲ್ ನ ಬನ್ಸಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು" ಎಂದು ಅವರ ಮಗ ಮತ್ತು ಮಾಜಿ ರಾಜ್ಯ ಸಚಿವ ದೀಪಕ್ ಜೋಶಿ ಪಿಟಿಐಗೆ ತಿಳಿಸಿದ್ದಾರೆ.

ಮಾಜಿ ಸಿಎಂಗೆ ಮೂವರು ಗಂಡು ಮತ್ತು ಮೂವರು ಪುತ್ರಿಯರಿದ್ದಾರೆ. ಅವರ ಪತ್ನಿ ಕೆಲವು ತಿಂಗಳ ಹಿಂದೆ ನಿಧನರಾದರು ಎಂದು ಮೂಲವೊಂದು ತಿಳಿಸಿದೆ.

ಜುಲೈ 14, 1929 ರಂದು ಜನಿಸಿದ ಜೋಶಿ ಅವರನ್ನು 'ರಾಜಕೀಯದ ಸಂತ' ಎಂದು ಕರೆಯಲಾಗುತ್ತಿತ್ತು, 1977 ರಿಂದ 1978 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ  ಅವರು ಸೇವೆ ಸಲ್ಲಿಸಿದ್ದರು. ಎಂಟು ಬಾರಿ ಶಾಸಕರಾಗಿದ್ದ ಅವರು ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರ ಅಂತ್ಯ ಸಂಸ್ಕಾರ ಸೋಮವಾರ ದೇವಾಸ್ ಜಿಲ್ಲೆಯ ಅವರ ಹುಟ್ಟೂರು ಹತ್ಪಿಪಾಲ್ಯದಲ್ಲಿ ನಡೆಸಲಾಗುವುದು ಎಂದು ಬಿಜೆಪಿ ಮಾಜಿ ಸಂಸದ ಅಲೋಕ್ ಸಂಜರ್ ತಿಳಿಸಿದ್ದಾರೆ.ಜೋಶಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ರಾಜ್ಯ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆಸ್ಪತ್ರೆಗೆ ಧಾವಿಸಿ ಅಂತಿಮ ದರ್ಶನ ಪಡೆದಿದ್ದಾರೆ.

SCROLL FOR NEXT