ದೇಶ

ರಾಜ್ಯಪಾಲರ ವಿರುದ್ಧ 'ಸುಪ್ರೀಂ'ನಲ್ಲಿ ಅರ್ಜಿ: ನ್ಯಾಯಾಲಯದಲ್ಲಿ ಇಲ್ಲ ಮಹಾರಾಷ್ಟ್ರ ಸರ್ಕಾರ ಪ್ರಾತಿನಿಧ್ಯ 

Sumana Upadhyaya

ನವದೆಹಲಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹಿಂಪಡೆದು ತರಾತುರಿಯಲ್ಲಿ ಬಿಜೆಪಿ ಮತ್ತು ಅಜಿತ್ ಪವಾರ್ ಅವರಿಗೆ ಪ್ರಮಾಣವಚನ ಸ್ವೀಕರಿಸಲು ಆಹ್ವಾನ ನೀಡಿರುವ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಭಾನುವಾರ ಕೈಗೆತ್ತಿಕೊಳ್ಳಲಿದ್ದು ಮಹಾರಾಷ್ಟ್ರ ಸರ್ಕಾರವನ್ನು ವಿಚಾರಣೆ ವೇಳೆ ಯಾರೂ ಪ್ರತಿನಿಧಿಸುವುದಿಲ್ಲ ಎಂದು ತಿಳಿದುಬಂದಿದೆ.


ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿಂದ ಯಾವುದೇ ನೊಟೀಸ್ ಬಂದಿಲ್ಲದಿರುವುದರಿಂದ ಕೋರ್ಟ್ ನಲ್ಲಿ ವಿಚಾರಣೆ ವೇಳೆ ಪ್ರತಿನಿಧಿಸುವುದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಆದರೂ ಮಹಾರಾಷ್ಟ್ರ ಸರ್ಕಾರದ ಸ್ಥಾಯಿ ಸಮಿತಿ ತಟಸ್ಥ ನಿಲುವು ತಳೆಯಲು ನಿರ್ಧರಿಸಿದ್ದು, ಕೋರ್ಟ್ ಅಪೇಕ್ಷಿಸಿದರೆ ಅಥವಾ ಅಗತ್ಯಬಿದ್ದರೆ ಸರ್ಕಾರವನ್ನು ಪ್ರತಿನಿಧಿಸುವುದಾಗಿ ಹೇಳಿದೆ.
ಮಹಾರಾಷ್ಟ್ರ ರಾಜಭವನದ ಪರವಾಗಿ ಅಟೊರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಪ್ರತಿನಿಧಿಸಲಿದ್ದು, ಹಿರಿಯ ವಕೀಲ ಮುಕುಲ್ ರೊಹಟ್ಗಿ ಬಿಜೆಪಿ ಪರವಾಗಿ ವಾದ ಮಂಡಿಸಲಿದ್ದಾರೆ.


ಈ ಮಧ್ಯೆ ನಿನ್ನೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಬಿಜೆಪಿಗೆ ಇಂದೇ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಹೇಳಬೇಕೆಂದು ಒತ್ತಾಯಿಸಿದೆ. ಅರ್ಜಿದಾರರ ಪರವಾಗಿ ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಲಿದ್ದಾರೆ. ಇಂದು ಬೆಳಗ್ಗೆ 11.30ಕ್ಕೆ ವಿಚಾರಣೆ ನಡೆಯಲಿದೆ.

SCROLL FOR NEXT