ಎಚ್ ಡಿ ದೇವೇಗೌಡ ಹಾಗೂ ಅವರ ಕುಟುಂಬ ಸದಸ್ಯರು 
ದೇಶ

ಕಾರ್ತಿಕ ಮಾಸದ ಕಡೆಯ ಸೋಮವಾರ: ಗುಜರಾತಿನಲ್ಲಿ ಜ್ಯೋತಿರ್ಲಿಂಗನ ದರ್ಶನ ಪಡೆದ ಎಚ್. ಡಿ. ದೇವೇಗೌಡ

ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಜ್ಯೋತಿರ್ಲಿಂಗ ದರ್ಶನಕ್ಕಾಗಿ ದೇವೇಗೌಡರು ಗುಜರಾತ್‌ಗೆ ತೆರಳಿದ್ದಾರೆ.

ಗುಜರಾತ್: ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ರಾಜಕಾರಣಕ್ಕಷ್ಟೆ ಖ್ಯಾತಿ ಪಡೆದಿಲ್ಲ‌ ದೈವಭಕ್ತಿಗೂ ಹೆಸರಾಗಿದೆ. ಚುನಾವಣೆ ಬರಲಿ ಅಮವಾಸ್ಯೆ, ಹುಣ್ಣಿಮೆಯೇ ಇರಲಿ ದೇವಸ್ಥಾನ ಪೂಜೆ ಪುನಸ್ಕಾರ ಎಂದೆಲ್ಲ ಈ ಕುಟುಂಬ ದೇವರ ಮೊರೆ ಹೋಗುತ್ತಲೇ ಇರುತ್ತದೆ.

ಒಂದೊಂದು ಕೆಲಸ ಕಾರ್ಯಕ್ಕೂ ಒಬ್ಬೊಬ್ಬರು ಜ್ಯೋತಿಷಿಗಳು ಇವರಿಗೆ. ರಾಜಕೀಯಕ್ಕೊಬ್ಬರಾದರೆ ಆರೋಗ್ಯ ಕುಟುಂಬಕ್ಕೂ ಮತ್ತಿನ್ಯಾರೋ. ಜ್ಯೋತಿಷ್ಯ, ಮಂತ್ರ, ಹೋಮಹವನ, ಜಾತಕಕ್ಕಾಗಿ ಸ್ವಾಮೀಜಿಗಳನ್ನು ಕೇಳುವುದು, ದೇವರ ಅನುಗ್ರಹಕ್ಕಾಗಿ ದೇವೇಗೌಡರು ಅವರ ಮಕ್ಕಳು ಮೊಮ್ಮಕ್ಕಳು ಹೋಗದ ಸ್ಥಳವಿಲ್ಲ ಎನ್ನಬಹುದು.

ಇದೀಗ ಜ್ಯೋತಿರ್ಲಿಂಗ ದರ್ಶನಕ್ಕಾಗಿ ದೇವೇಗೌಡರು ಗುಜರಾತ್‌ಗೆ ತೆರಳಿದ್ದಾರೆ. ಕಾರ್ತಿಕ‌ ಮಾಸದ ಕಡೆಯ ಸೋಮವಾರ ಇಲ್ಲಿನ ಗಿರಿ ಸೋಮನಾಥ ಜಿಲ್ಲೆಯಲ್ಲಿರುವ ಜ್ಯೋತಿರ್ಲಿಂಗ ಶಿವನ ದರ್ಶನವನ್ನು ಪತ್ನಿ ಚೆನ್ನಮ್ಮ, ಪುತ್ರಿ ಅನುಸೂಯ ಸೇರಿದಂತೆ ಮತ್ತಿತರೊಡನೆ ಈಶ್ವರನ ದರ್ಶನ ಪಡೆದು ದೇವೇಗೌಡರು ಪುನೀತರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!