ದೇಶ

ಫಡ್ನವೀಸ್ ರಾಜೀನಾಮೆ ನೀಡದಿದ್ದರೆ, ವಿಧಾನಸಭೆಯಲ್ಲೇ ಸರ್ಕಾರಕ್ಕೆ ಸೋಲು: ಎನ್'ಸಿಪಿ 

Manjula VN

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೇ ಹೋದರೆ, ವಿಧಾನಸಭೆಯಲ್ಲಿ ಸರ್ಕಾರ ಸೋಲು ಕಾಣಲಿದೆ ಎಂದು ಎನ್'ಸಿಪಿ ನಾಯಕ ನವಾಬ್ ಮಲಿಕ್ ಅವರು ಸೋಮವಾರ ಹೇಳಿದ್ದಾರೆ. 

ತಮಗೆ ಬಹುಮತವಿಲ್ಲ ಎಂಬುದನ್ನು ಫಡ್ನವೀಸ್ ಮನವರಿಕೆ ಮಾಡಿಕೊಳ್ಳಬೇಕಿದೆ. ತಾವು ಮಾಡುತ್ತಿರುವುದು ತಪ್ಪು ಎಂಬುದು ಅವರಿಗೆ ತಿಳಿಯಬೇಕಿದೆ. ಒಂದು ಫಡ್ನವೀಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೇ ಹೋದರೆ, ವಿಧಾನಸಭೆಯಲ್ಲಿ ಸರ್ಕಾರ ಸೋಲು ಕಾಣಲಿದೆ ಎಂದು ಹೇಳಿದ್ದಾರೆ. 

ನಮಗೆ 165 ಶಾಸಕರ ಬೆಂಬಲವಿದೆ. 53 ಎನ್'ಸಿಪಿ ಶಾಸಕರು ನಮ್ಮೊಂದಿಗಿದ್ದಾರೆ. ಅಜಿತ್ ಪವಾರ್ ಅವರು ತಪ್ಪು ಮಾಡಿದ್ದಾರೆ. ಕೂಡಲೇ ಅವರೂ ರಾಜೀನಾಮೆ ನೀಡಬೇಕೆಂದು ತಿಳಿಸಿದ್ದಾರೆ. 

ಮಹಾರಾಷ್ಟ್ರ ರಾಜಕೀಯ ಪರಿಸ್ಥಿತಿ ಕುರಿತು ಸುಪ್ರೀಂಕೋರ್ಟ್ ಶೀಘ್ರದಲ್ಲಿಯೇ ತೀರ್ಪು ಪ್ರಕಟಿಸಲಿದೆ. ಎಲ್ಲಾ ಸತ್ಯಾಂಶಗಳ ಪರಿಶೀಲನೆ ಬಳಿಕ ನ್ಯಾಯಾಲಯ ತಕ್ಕ ನಿರ್ಧಾರ ತೆಗೆದುಕೊಳ್ಳಲಿದೆ, ಸರ್ಕಾರ ರಚನೆಗೆ ಎನ್'ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆ ಹಕ್ಕು ಮಂಡಿಸಲಿದೆ. ಇದಾದ ನಂತರವೇ ನಮಗೆ ಸತ್ಯಾಸತ್ಯತೆಗಳು ತಿಳಿಯಲಿದೆ. 

ಎನ್'ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆ ಮೈತ್ರಿಯೊಂದಿಗೆ ನೂತನ ಸರ್ಕಾರ ರಚನೆಗೊಳ್ಳಬೇಕು. ಮುಖ್ಯಮಂತ್ರಿ ಸ್ಥಾನ ಕುರಿತು ಈವರೆಗೂ ನಿರ್ಧಾರ ಕೈಗೊಂಡಿಲ್ಲ. ಇವೆಲ್ಲಾ ಎರಡನೇ ಮಾತು. ಸರ್ಕಾರ ರಚಿಸುವುದಷ್ಟೇ ನಮ್ಮ ಮೊದಲ ಆದ್ಯತೆ ಎಂದಿದ್ದಾರೆ. 

SCROLL FOR NEXT