ದೇಶ

ಬಹುಮತ ಸಾಬೀತಿಗೆ ಮುನ್ನವೇ ಡಿಸಿಎಂ ಸ್ಥಾನಕ್ಕೆ ಅಜಿತ್ ಪವಾರ್ ರಾಜೀನಾಮೆ 

Lingaraj Badiger

ನವದೆಹಲಿ; ಮಹಾರಾಷ್ಟ್ರ ಸರ್ಕಾರ ರಚನೆ ಸಂಬಂಧ ನಾಳೆ ಬಹುಮತ ಸಾಬೀತಿಗೆ ಮುನ್ನವೇ ಡಿಸಿಎಂ ಸ್ಥಾನಕ್ಕೆ ಅಜಿತ್ ಪವಾರ್ ರಾಜೀನಾಮೆ ಸಲ್ಲಿಸಿದ್ದಾರೆ.

ಇಂದು ಸುಪ್ರೀಂ ಕೋರ್ಟ್ ನಾಳೆ ಸಂಜೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಸೂಚನೆ ನೀಡಿತ್ತು. ಅದಕ್ಕೂ ಮುನ್ನವೇ ಅಜಿತ್ ಪವಾರ್ ತಮ್ಮ ರಾಜೀನಾಮೆ ಪತ್ರವನ್ನು ಸಿಎಂ ದೇವೇಂದ್ರ ಫಡ್ನವಿಸ್ ಗೆ ಸಲ್ಲಿಸಿದ್ದಾರೆ.

ಬಹುಮತ ಸಾಬೀತಿಗೆ ಸಂಬಂಧಪಟ್ಟಂತೆ ಸಿಎಂ ದೇವೇಂದ್ರ ಫಡ್ನವಿಸ್ ಇಂದು ಅಪರಾಹ್ನ 3.30ಕ್ಕೆ ಸುದ್ದಿಗೋಷ್ಠಿ ಕರೆದಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳು ತೀವ್ರ ಕುತೂಹಲ ಮೂಡಿಸಿವೆ.

ಸೋಮವಾರ ಶಿವಸೇನಾ, ಎನ್​ಸಿಪಿ ಹಾಗೂ ಕಾಂಗ್ರೆಸ್ ಶಾಸಕರು ಮುಂಬೈನ ಖಾಸಗಿ ಹೋಟೆಲ್ ನಲ್ಲಿ ಶಾಸಕರ ಪರೇಡ್ ನಡೆಸುವ ಮೂಲಕ ಮಾಧ್ಯಮದ ಮುಂದೆ ಶಕ್ತಿ ಪ್ರದರ್ಶಿಸಿದ್ದವು.  162 ಶಾಸಕರು ಈ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ  ತಮ್ಮ ಒಗ್ಗಟ್ಟನ್ನು ತೋರ್ಪಡಿಸಿದ್ದರು. ಇದರಿಂದಾಗಿ ಏಕಾಂಗಿಯಂತೆ ಕಂಡುಬಂದಿದ್ದ ಅಜಿತ್ ಪವಾರ್ ತಡರಾತ್ರಿ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಈ ಮಾತುಕತೆ ಫಲಪ್ರಧವಾಗಿದ್ದು, ಇದೀಗ ಅಜಿತ್ ಪವಾರ್  ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

SCROLL FOR NEXT