ದೇಶ

ಕಾಶ್ಮೀರದ ಪೊಲೀಸರು, ಸರಪಂಚ್ ಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕರಿಗೆ ಐಎಸ್ಐ ಸೂಚನೆ! 

Srinivas Rao BV

ನವದೆಹಲಿ: ಕಾಶ್ಮೀರದಲ್ಲಿ ಶಾಂತಿ ಕದಡಲು ಪ್ರಯತ್ನ ಮುಂದುವರೆಸಿರುವ ಪಾಕಿಸ್ತಾನ ತನ್ನ ಗುಪ್ತ ಚರ ಇಲಾಖೆ ಐಎಸ್ಐ ಮೂಲಕ ಭಾರತದ ಪೊಲೀಸರು ಹಾಗೂ ಸರಪಂಚ್ ಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕರಿಗೆ ಸಂದೇಶ ರವಾನೆ ಮಾಡಿದೆ. 

ಜೀ ನ್ಯೂಸ್ ಮಾಧ್ಯಮದ ವರದಿಯ ಪ್ರಕಾರ ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯನ್ನು ಸಕ್ರಿಯವಾಗಿಡಲು ಸತತ ಪ್ರಯತ್ನ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆ ಹಿಜ್ಬುಲ್ ಮುಕಾಹಿದ್ದೀನ್ ಉಗ್ರ ಸಂಘಟನೆಗೆ ಮಾರಕವಾಗಿ ಪರಿಣಮಿಸಿದ್ದು, ತತ್ಪರಿಣಾಮವಾಗಿ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ನ ಕೇವಲ ಓರ್ವ ಕಮಾಂಡರ್ ಮಾತ್ರ ಬದುಕುಳಿದಿದ್ದಾನೆ. 

ಇತ್ತೀಚಿನ ವರದಿಯ ಪ್ರಕಾರ ಬದುಕುಳಿದಿರುವ ಓವ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ರಿಯಾಜ್ ನಾಯ್ಕೂ ಗೆ ಸಕ್ರಿಯವಾಗಿ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡುವಂತೆ ಮಾಡಲು ಪಾಕ್ ಸೂಚನೆ ನೀಡಿದೆ. ಈ ಸಂಬಂಧ ಪಾಕ್ ಆಕ್ರಮಿತ ಕಾಶ್ಮೀರದ ನಿಕಿಯಾಲ್ ಸೆಕ್ಟರ್ ನಲ್ಲಿ ಐಎಸ್ಐ ಅಧಿಕಾರಿಗಳು ಭಾರತದ ವಿರುದ್ಧ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಉಗ್ರರು, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರೂ ಸಹ ಭಾಗಿಯಾಗಿದ್ದರು.

SCROLL FOR NEXT