ದೇಶ

ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ, ಕೊಲೆ ಪ್ರಕರಣ ಬೇಧಿಸಿದ ಪೊಲೀಸರು, ನಾಲ್ವರು ಕಾಮುಕರ ಬಂಧನ

Lingaraj Badiger

ಹೈದರಾಬಾದ್: ಪಶುವೈದ್ಯೆ ಡಾ. ಪ್ರಿಯಾಂಕಾ ರೆಡ್ಡಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣವನ್ನು ಸೈಬರಾಬಾದ್ ಪೊಲೀಸರು ಬೇಧಿಸಿದ್ದು, ನಾಲ್ವರು ಕಾಮುಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಪರಿಗಣಿಸಿರುವ ಪೊಲೀಸರು ಟ್ರಕ್ ಚಾಲಕ, ಆತನ ಸಹಚರ ಮತ್ತು ಇತರೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷೆನ್ 376 ಡಿ, 302, 201 ಮತ್ತು ಅಪರಾಧ ತಿದ್ದುಪಡಿ ಕಾಯ್ದೆ 2013ರಡಿ ಕೇಸ್ ದಾಖಲಿಸಲಾಗಿದೆ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿಸಿ ಸಜ್ಜನರ್ ಅವರು ತಿಳಿಸಿದ್ದಾರೆ.

ಈ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್ ಗೆ ವರ್ಗಾಯಿಸಲಾಗುವುದು ಮತ್ತು ಆರೋಪಿಗಳಿಗೆ ಗಲ್ಲು ಶಿಕ್ಷೆ ಕೊಡಿಸಲು ಯತ್ನಿಸಲಾಗುವುದು ಸಜ್ಜನರ್ ಅವರು ಹೇಳಿದ್ದಾರೆ. ಅಲ್ಲದೆ ಆರೋಪಿಗಳು ಕ್ರಿಮಿನಲ್ ಹಿನ್ನಲೆ ಹೊಂದಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂಬ ಪ್ರಿಯಾಂಕಾ ರೆಡ್ಡಿ ಪೋಷಕರ ಆರೋಪವನ್ನು ತಳ್ಳಿಹಾಕದ ಪೊಲೀಸ್ ಆಯುಕ್ತರು, ಅವರ ಸಹೋದರಿ ಆರ್ ಜಿಐ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ ತಕ್ಷಣ ನಮ್ಮ ಪೊಲೀಸರು ಸಂತ್ರಸ್ತ ಮಹಿಳೆಯ ಹುಡುಕಾಟ ಆರಂಭಿಸಿದ್ದಾರೆ ಎಂದರು.

ಭೀಕರ ಘಟನೆಯನ್ನು ವಿವರಿಸಿದ ಸಜ್ಜನರ್, ಸಂತ್ರಸ್ತೆಯು ತನ್ನ ಸ್ಕೂಟರ್ ಅನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿರುವುದನ್ನು ಗಮನಿಸಿದ ಆರೋಪಿಗಳು, ಅವರನ್ನು ಬಲೆಗೆ ಬೀಳಿಸಿ ಅತ್ಯಾಚಾರ ಮಾಡುವ ಯೋಜನೆಯನ್ನು ರೂಪಿಸಿದ್ದಾರೆ ಎಂದರು.

SCROLL FOR NEXT