ದೇಶ

ಪಿಎಂ ಮೋದಿ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಸೋದರರಂತೆ:ಶಿವಸೇನೆ 

Sumana Upadhyaya

ಮುಂಬೈ: ಹಿಂದಿನ ದೇವೇಂದ್ರ ಫಡ್ನವಿಸ್ ಸರ್ಕಾರ ಮಾಡಿರುವ ತಪ್ಪುಗಳನ್ನು ಸರಿಪಡಿಸಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಸರ್ಕಾರ ನಡೆಸಲಿದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ತಿಳಿಸಿದೆ.


ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅದರ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಇಂದು ಈ ಬಗ್ಗೆ ಬರೆಯಲಾಗಿದೆ. ಪಿಎಂ ನರೇಂದ್ರ ಮೋದಿ ಕೇವಲ ಒಂದು ಪಕ್ಷಕ್ಕೆ ಸೀಮಿತರಾದವರಲ್ಲ. ಮಹಾರಾಷ್ಟ್ರ ಜನತೆಯ ಮೇಲಿನ ತಮ್ಮ ಜವಾಬ್ದಾರಿಗಳನ್ನು ಅವರು ಪೂರೈಸಬೇಕು ಎಂದಿದೆ.


ಮಹಾರಾಷ್ಟ್ರ ರೈತರಿಗೆ ಕೇಂದ್ರದಿಂದ ಪರಿಹಾರ ಸಿಗಬೇಕು. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಸಮಸ್ಯೆಗಳಿದ್ದರೂ ಸಹ ಉದ್ಧವ್ ಠಾಕ್ರೆ ಮತ್ತು ಪಿಎಂ ನರೇಂದ್ರ ಮೋದಿ ಸೋದರರಂತೆ. ಹೀಗಾಗಿ ಮಹಾರಾಷ್ಟ್ರದ ಕಿರಿಯ ಸೋದರನಿಗೆ ಅವರು ತಮ್ಮ ಜವಾಬ್ದಾರಿಗಳನ್ನು ಪೂರೈಸಬೇಕು ಎಂದು ಸಂಪಾದಕೀಯದಲ್ಲಿ ಬರೆದುಕೊಂಡಿದೆ.


ದೆಹಲಿಗೆ ನಮ್ಮ ಶಕ್ತಿಯೇನೆಂದು ತೋರಿಸಿದ್ದೇವೆ. ಮಹಾರಾಷ್ಟ್ರದಿಂದ ಸಾಕಷ್ಟು ಹಣ ಕೇಂದ್ರಕ್ಕೆ ಹೋಗುತ್ತದೆ. ದೇಶದ ಆರ್ಥಿಕತೆ ಮುಂಬೈ ಮೇಲಿದೆ. ಮುಂಬೈ ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಕಲ್ಪಿಸುತ್ತದೆ. ಗಡಿಗಳಲ್ಲಿ ಕೂಡ ಮಹಾರಾಷ್ಟ್ರದ ಕೊಡುಗೆ ಸಾಕಷ್ಟಿದೆ. ಹೀಗಾಗಿ ಮಹಾರಾಷ್ಟ್ರಕ್ಕೆ ಮೋದಿಯವರು ತಕ್ಕ ಗೌರವ ಕೊಡಲೇಬೇಕು ಎಂದರು.

SCROLL FOR NEXT