ಭಾರತಕ್ಕೆ ಆಗಮಿಸಿರುವ ಶ್ರೀಲಂಕಾ ಅಧ್ಯಕ್ಷರನ್ನು ರಾಷ್ಟ್ರಪತಿ ಕೋವಿಂದ್ ಸ್ವಾಗತಿಸಿದ್ದಾರೆ 
ದೇಶ

ಸಾರ್ವಜನಿಕರ ಒಳಿತಿಗಾಗಿ ಭಾರತ-ಲಂಕಾ ಒಟ್ಟಾಗಿ ಕೆಲಸ ಮಾಡಬೇಕು: ಶ್ರೀಲಂಕಾ ಅಧ್ಯಕ್ಷ

ಭಾರತ ಮತ್ತು ಶ್ರೀಲಂಕಾದ ಜನರ ಅನುಕೂಲಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಶ್ರೀಲ

ನವದೆಹಲಿ: ಭಾರತ ಮತ್ತು ಶ್ರೀಲಂಕಾದ ಜನರ ಅನುಕೂಲಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಶ್ರೀಲ<ಕಾ ಅಧ್ಯಕ್ಷ ಗೋಟಬಯಾ ರಾಜಪಕ್ಷೆ ಹೇಳಿದ್ದಾರೆ. 

ಶ್ರೀಲಂಕಾ ಅಧ್ಯಕ್ಷರು  ಭಾರತದೊಂದಿಗೆ ತಮ್ಮ ದೇಶದ ದ್ವಿಪಕ್ಷೀಯ ಸಂಬಂಧವನ್ನು "ಅತ್ಯಂತ ಉನ್ನತ ಮಟ್ಟಕ್ಕೆ" ಕೊಂಡೊಯ್ಯಲು ಪ್ರಯತ್ನಿಸುವುದಾಗಿ ಹೇಳೀದ್ದಾರೆ. ಅವರು ದೆಹಲಿಗೆ ಆಗಮಿಸಿದ್ದು ರಾಷ್ಟ್ರಪತಿ ಭವನದಲ್ಲಿ ವಿಧ್ಯುಕ್ತ ಸ್ವಾಗತದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

 ಉಭಯ ದೇಶಗಳ ಜನರ ಸುರಕ್ಷತೆ ಮತ್ತು ಒಟ್ಟಾರೆ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಭಾರತ ಮತ್ತು ಶ್ರೀಲಂಕಾ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು. ರಾಜಪಕ್ಷೆ ಮೂರು ದಿನಗಳ ಅಧಿಕೃತ ಭೇಟಿಗಾಗಿ ಗುರುವಾರ ಭಾರತಕ್ಕೆ ಆಗಮಿಸಿದ್ದಾರೆ.10 ದಿನಗಳ ಹಿಂದೆ ಶ್ರೀಲಂಕಾದ ಆಡಳಿತವನ್ನು ವಹಿಸಿಕೊಂಡ ನಂತರ ಅವರು ತಮ್ಮ ಮೊದಲ ವಿದೇಶ ಪ್ರವಾಸವನ್ನು ಕೈಗೊಂಡಿದ್ದು ಭಾರತದೊಂದಿಗೆ ಲಂಕಾದ ಸಂಬಂಧಗಳ ಪ್ರಾಮುಖ್ಯತೆಯನ್ನು  ಬಿಂಬಿಸಿದ್ದಾರೆ.

ಭೇಟಿಯ ಕಾರಣದಿಂದ ಅವರ ನಿರೀಕ್ಷಿಎಗಳು ಬಹಳವೇ ಹೆಚ್ಚಾಗಿದ್ದು  ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜಪಕ್ಷೆ  ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವಿಸ್ತಾರವನ್ನು ಒಳಗೊಂಡ ಮಾತುಕತೆ ನಡೆಸುತ್ತಿದ್ದಾರೆ. “ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧವನ್ನು ಅತ್ಯಂತ ಉನ್ನತ ಮಟ್ಟಕ್ಕೆ ತರಲು ನಾನು ಬಯಸುತ್ತೇನೆ. ನಾವು ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದೇವೆ. "ಭಾರತ ಮತ್ತು ಶ್ರೀಲಂಕಾದ ಜನರ ಅನುಕೂಲಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ"

ಇದಕ್ಕೆ ಮುನ್ನ ಅವರು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಹಲವಾರು ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಶ್ರೀಲಂಕಾದ ತಮಿಳು ಸಮುದಾಯದ ಆಕಾಂಕ್ಷೆಗಳನ್ನು ಈಡೇರಿಸುವುದು, ಹಿಂದೂ ಮಹಾಸಾಗರ ಪ್ರದೇಶದ ಸ್ಥಿತಿಗತಿ ಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಹೆಚ್ಚಿಸುವ ಕ್ರಮಗಳು ಸೇರಿದಂತೆ ಹಲವು ವಿಷಯಗಳು ಮೋದಿ ಹಾಗೂ ರಾಜಪಕ್ಷೆ  ಮಾತುಕತೆಯಲ್ಲಿ ಕಂಡುಬರಲಿದೆ.

ಕಳೆದ ವಾರ, ಭಾರತವು ಹೊಸದಾಗಿ ರಚನೆಯಾಗಿರುವ ಶ್ರೀಲಂಕಾ ಸರ್ಕಾರದೊಡನೆ ಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದೆ ಎಂದು ಹೇಳಿತ್ತು. ಆ ದೇಶದ ತಮಿಳು ಸಮುದಾಯದ ಆಕಾಂಕ್ಷೆಗಳನ್ನು ಈಡೇರಿಸಲು ಸಾಧ್ಯವಾಗಲಿದೆ ಎಂದೂ ಆಶಯ ವ್ಯಕ್ತಪಡಿಸಿತ್ತು.

ದೇಶದ ಸುದೀರ್ಘ ಅಂತರ್ಯುದ್ಧವನ್ನು ಕೊನೆಗೊಳಿಸಿದ ಕೀರ್ತಿಗೆ ಪಾತ್ರರಾದ ಮಾಜಿ ರಕ್ಷಣಾ ಕಾರ್ಯದರ್ಶಿ ರಾಜಪಕ್ಷೆ  ದ್ವೀಪ ರಾಷ್ಟ್ರದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು  ನವೆಂಬರ್ 18 ರಂದು ದ್ವೀಪ ರಾಷ್ಟ್ರದ ಹೊಸ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಮೂರು ದಿನಗಳ ನಂತರ ಅವರು ತಮ್ಮ ಹಿರಿಯ ಸಹೋದರ ಮಹಿಂದಾ  ರಾಜಪಕ್ಷೆ   ಅವರನ್ನು ಪ್ರಧಾನ ಮಂತ್ರಿಯಾಗಿ ನೇಮಿಸಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ. ವಿಜಯೇಂದ್ರ

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ