ದೇಶ

ಗಾಂಧಿ ಜಯಂತಿ: ಸಬರ್ ಮತಿ ಆಶ್ರಮಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ  

Srinivas Rao BV

ದೇಶಾದ್ಯಂತ ಅ.02 ರಂದು ಮಹಾತ್ಮಾ ಗಾಂಧಿ ಅವರ 150 ನೇ ಜನ್ಮ ದಿನವನ್ನು ಆಚರಿಸಲಾಗುತ್ತಿದ್ದು, ರಾಷ್ಟ್ರವ್ಯಾಪಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗಾಂಧಿ ಜಯಂತಿ ಹಿನ್ನೆಲೆ ದೇಶದ ಜನತೆಗೆ ಸಂದೇಶ ರವಾನೆ ಮಾಡಿದ್ದು,  ಗಾಂಧಿ ಜಯಂತಿ, ಸತ್ಯ, ಅಹಿಂಸೆ, ಸೌಹಾರ್ದತೆ, ನೈತಿಕತೆ ಹಾಗೂ ಸರಳತೆಯ ಮೌಲ್ಯಗಳನ್ನು ನಮಗೆ ಮೈಗೂಡಿಸಿಕೊಳ್ಳುವುದಕ್ಕೆ ವಿಷೇಷವಾದ ಸಂದರ್ಭ ಎಂದು ಹೇಳಿದ್ದಾರೆ. 

ಮಹಾತ್ಮಾ ಗಾಂಧಿ ಮನುಕುಲಕ್ಕೆ ನೀಡಿದ ಅಸಂಖ್ಯ ಸಂದೇಶಗಳಿಗೆ ಸತ್ಯ, ಅಹಿಂಸೆ, ಸರ್ವೋದಯವೇ ಅಡಿಪಾಯ, ಗಾಂಧೀಜಿ ಜಾಗತಿಕ ಐಕಾನ್ ಎಂದು ಕೋವಿಂದ್ ಮಹಾತ್ಮನನ್ನು ಸ್ಮರಿಸಿದ್ದಾರೆ. 

ಇನ್ನು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ ಘಾಟ್ ಗೆ ಭೇಟಿ ನೀಡಿ, ಗಾಂಧಿ ಸಮಾಧಿಗೆ ತೆರಳಿ ನಮನ ಸಲ್ಲಿಸಲಿದ್ದಾರೆ.  ಬಳಿಕ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಮಾಧಿ ಇರುವ ವಿಜಯ್ ಘಾಟ್ ಗೆ ತೆರಳಿ ನಮನ ಸಲ್ಲಿಸಲಿದ್ದಾರೆ. ಸಂಜೆ ವೇಳೆಗೆ ಅಹ್ಮದಾಬಾದ್ ಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಸಬರ್ ಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. 

SCROLL FOR NEXT