ದೇಶ

ಗರ್ಭಪಾತಕ್ಕೆ ಅನುಮತಿ ಕೊಡಿ: 3 ವರ್ಷದಲ್ಲಿ 194 ಮಹಿಳೆಯರಿಂದ ಕೋರ್ಟ್ ಗೆ ಮೊರೆ

Raghavendra Adiga

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಸುಮಾರು 200 ಮಹಿಳೆಯರು ತಮಗೆ ಬೇಡವಾದ ಗರ್ಭ ತೆಗೆಸಲು ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ. ಇದರಲ್ಲಿ ಬಹುತೇಕರು ಅತ್ಯಾಚಾರಕ್ಕೆ ಒಳಗಾದವರೆಂಬುದು ಗಮನಾರ್ಹ ಅಂಶವಾಗಿದೆ.

ಪ್ರತಿಗ್ಯಾ ಕ್ಯಾಮೊರ್ ಲಿಂಗ ಸಮಾನತೆ ಮತ್ತು ಸುರಕ್ಷಿತ ಗರ್ಭಪಾತದ ಅಧ್ಯಯನವು ಜೂನ್ 2016 ರಿಂದ 2019 ರ ಏಪ್ರಿಲ್ ನಡುವೆ 194 ಮಹಿಳೆಯರು ಗರ್ಭಪಾತಕ್ಕೆ ಅನುಮತಿ ಕೋರಿ ನ್ಯಾಯಾಲಯಗಳ ಮೆಟ್ಟಿಲೇರಿದ್ದಾರೆ ಎಂದು ವರದಿ ಮಾಡಿದೆ. ಇದರಲಿ 21 ಮಹಿಳೆಯರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರೆ ಉಳಿದವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಪ್ರಕರಣಗಳು ಗರ್ಭಾವಸ್ಥೆಯ 20 ವಾರಗಳಿಗಿಂತ ಹೆಚ್ಚಿನವು, ಅವುಗಳಲ್ಲಿ ಐದು ಅತ್ಯಾಚಾರ ಪ್ರಕರಣಗಳು ಮತ್ತು 15 ಅಸಹಜ ಭ್ರೂಣಕ್ಕೆ ಸಂಬಂಧಿಸಿದೆ. ಸರ್ವೋಚ್ಚ ನ್ಯಾಯಾಲಯ ಒಟ್ಟು ಐದು ಪ್ರಕರಣಗಳಲ್ಲಿ ಗರ್ಭಪ್ತಕ್ಕೆ ಅನುಮತಿ ನಿರಾಕರಿಸಿದರೆ ಉಳಿದ 15 ಗರ್ಭಪಾತಕ್ಕೆ ಅನುಮತಿ ಕೊಟ್ಟಿದೆ.

ನ್ಯಾಯಾಲಯವು ನಿರಾಕರಿಸಿದ ಐದು ಪ್ರಕರಣಗಳಲ್ಲಿ, ಮೂರು ಭ್ರೂಣದ ವೈಪರೀತ್ಯಗಳನ್ನು ಒಳಗೊಂಡಿವೆ, ಅಲ್ಲಿ ಪ್ರತಿ ಪ್ರಕರಣವು 26-28 ವಾರಗಳ ಭ್ರೂಣವನ್ನು ಹೊಂದಿದವಾಗಿದೆ.ಗರ್ಭಾವಸ್ಥೆಯ 20 ವಾರಗಳ ಮೊದಲು ಗರ್ಭಪಾತಕ್ಕೆ ಅವಕಾಶವಿರುತ್ತದೆ. ಆದರೆ ಅಧ್ಯಯನವು ಹೇಳಿದಂತೆ ಅನೇಕ ಮಹಿಳೆಯರು, ವಿಶೇಷವಾಗಿ ಆ ಅವಧಿಗಿಂತ ಕಡಿಮೆ ಅವಧಿಯ ಭ್ರೂಣವನ್ನು ತೆಗೆಸುವುದಕ್ಕಾಗಿ ಸಹ ನ್ಯಾಯಾಲಯದ ಕಟಕಟೆ ಏರಿದ್ದಾರೆ.

"ನ್ಯಾಯಾಲಯಗಳ ಮೊರೆ ಹೋಗುತ್ತಿರುವ 20 ವಾರಗಳಿಗಿಂತ ಕಡಿಮೆ ಗರ್ಭಧಾರಣೆಯ ಮಹಿಳೆಯರು ಎಂಟಿಪಿ ಕಾಯ್ದೆಯ ನಿಬಂಧನೆಗಳನ್ನು ಧಿಕ್ಕರಿಸುತ್ತಾರೆ ಹಾಗೆಯೇ ಗರ್ಭಪಾತದ ವಿನಃ ಆಗುವ ಪ್ರಮುಖ ಸಮಸ್ಯೆಗಳ ಕುರಿತು ವಾದಿಸುತ್ತಾರೆ. ಈ ಮಹಿಳೆಯರು ತಮ್ಮ ವೈದ್ಯರನ್ನು ಸಂಪರ್ಕಿಸಿದರೂ ಸಹ, ವೈದ್ಯಕೀಯ ಮಂಡಳಿಗಳ ಮುಂದೆ ಪರೀಕ್ಷೆಗೆ ಒಳಪಡುವ ದೀರ್ಘ ಮತ್ತು ದಣಿದ ಪ್ರಕ್ರಿಯೆಯನ್ನು ಅವರು ಎದುರಿಸಬೇಕಾಗುತ್ತದೆ. ಇಡೀ ಪ್ರಕ್ರಿಯೆಯು ಮಹಿಳೆಯರಿಗೆ ಆಘಾತವನ್ನುಂಟುಮಾಡುತ್ತದೆ ಮತ್ತು ಇದು ಅವರ ಹಕ್ಕುಗಳ ಉಲ್ಲಂಘನೆಯಾಗಿದೆ." ಅಭಿಯಾನದ ಸಿಇಒ ವಿ.ಎಸ್.ಚಂದ್ರಶೇಖರ್ ಹೇಳಿದ್ದಾರೆ.

ಮಹಿಳೆಯರ ಮಾನಸಿಕ ಸ್ಥಿತಿಗೆ ಘಾಸಿಯಾಗುವುದನ್ನು ತಪ್ಪಿಸಲು ಯಾವ ಕಾಲಮಿತಿಯನ್ನು ನೋಡದೆ ಎಲ್ಲಾ ಅತ್ಯಾಚಾರ ಪ್ರಕರಣದಲ್ಲಿ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂಬ ವಾದವನ್ನು ಅಭಿಯಾನ ಬೆಂಬಲಿಸುತ್ತದೆ.

SCROLL FOR NEXT