ದೇಶ

'ಒಡೆದಾಳುವ ರಾಜಕೀಯ ಬಂಗಾಳದಲ್ಲಿ ನಡೆಯಲ್ಲ' ಶಾ ಹೇಳಿಕೆಗೆ ದೀದಿ ತಿರುಗೇಟು

Srinivasamurthy VN

ಕೋಲ್ಕತಾ: ಬಿಜೆಪಿಯ ಒಡೆದು ಆಳುವ ನೀತಿ ಪಶ್ಚಿಮ ಬಂಗಾಳದಲ್ಲಿ ನಡೆಯುವುದಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಸ್ವಚ್ಛ ಭಾರತ ಅಭಿಯಾನದ ನಿಮಿತ್ತ ಇಂದು ಕೋಲ್ಕತಾದಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಮತಾ ಬ್ಯಾನರ್ಜೀ ಅವರು ಮತಕ್ಕಾಗಿ ನುಸುಳುಕೋರರನ್ನು ರಾಜ್ಯದಲ್ಲಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಪಶ್ಚಿಮ ಬಂಗಾಳದಲ್ಲಿ ಒಡೆದಾಳುವ ರಾಜಕಾರಣ ನಡೆಯುವುದಿಲ್ಲ ಎಂದು ಹೇಳಿದ್ದಾರೆ. 

'ಪ್ರತಿಯೊಬ್ಬರನ್ನೂ ನಮ್ಮ ರಾಜ್ಯಕ್ಕೆ ಸ್ವಾಗತಿಸುತ್ತೇವೆ ಮತ್ತು ನಮ್ಮ ಆತಿಥ್ಯವನ್ನು ಎಲ್ಲರೂ ಆನಂದಿಸುತ್ತಾರೆ. ದಯವಿಟ್ಟು ಧರ್ಮದ ಆಧಾರದ ಮೇಲೆ ರಾಜಕೀಯ ವಿಭಜನೆ ಮಾಡಬೇಡಿ, ಜನರಲ್ಲಿ ಬಿರುಕು ಮೂಡಿಸಲು ಪ್ರಯತ್ನಿಸಬೇಡಿ, ಬಂಗಾಳವು ಹಲವಾರು ಧರ್ಮಗಳ ನಾಯಕರನ್ನು ಯುಗ ಯುಗಗಳಿಂದ ಗೌರವಿಸುತ್ತ ಬಂದಿದೆ, ಇದನ್ನು ಎಂದಿಗೂ ಯಾರೂ ನಾಶಪಡಿಸಲು ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜೀ ಹೇಳಿದ್ದಾರೆ.

ಇಂದು ಅಮಿತ್ ಶಾ, ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿ ಕೇಂದ್ರ ಸರ್ಕಾರವು ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಾವಣೆಯನ್ನು ಜಾರಿಗೆ ತರುತ್ತದೆ. ತೃಣಮೂಲ ಕಾಂಗ್ರೆಸ್ ಇದಕ್ಕೆ ಎಷ್ಟೇ ವಿರೋಧಿಸಿದರೂ, ಬಿಜೆಪಿ ಅದನ್ನು ಪೂರೈಸಲಿದೆ ಎಂದು ಹೇಳಿದ್ದರು.

SCROLL FOR NEXT