ದೇಶ

ಮೆಡಿಕಲ್ ಓದೋರಿಗೆ ಸಿಹಿಸುದ್ದಿ! ಏಮ್ಸ್, ಜೆಐಪಿಎಂಇಆರ್ ಗೂ ಸಹ ನೀಟ್ ಮೂಲಕವೇ ಪ್ರವೇಶ, ಮುಂದಿನ ವರ್ಷವೇ ಜಾರಿ

Raghavendra Adiga

ನವದೆಹಲಿ: 2020 ರಿಂದ ಭಾರತದ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಗಿಟ್ಟಿಸಲು ಕೇವಲ ಒಂದೇ ಪ್ರವೇಶ ಪ್ರಈಕ್ಷೆ ನಡೆಯಲಿದೆ.ದೇಶದ ವಿವಿಧ ಭಾಗಗಳಲ್ಲಿರುವ ಏಮ್ಸ್ (ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಮತ್ತು ಪುದುಚೇರಿಯಲ್ಲಿರುವ ಜೆಐಪಿಎಂಇಆರ್ (ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಷನ್ ಆಂಡ್ ರಿಸರ್ಚ್) ಗಳು ಸಹ ಒಂದೇ ಪ್ರವೇಶ ಪರೀಕ್ಷೆಗಳ ಮೂಲಕ ಸೂಕ್ತ ಅಭ್ಯರ್ಥಿಗಳ ಆಯ್ಕೆ ನಡೆಸಲಿವೆ.

ಪ್ರಸ್ತುತ, ಏಮ್ಸ್ ಮತ್ತು ಜೆಐಪಿಎಂಇಆರ್  ಹೊರತುಪಡಿಸಿ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶವನ್ನು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮೂಲಕ ಮಾಡಲಾಗುತ್ತದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ನೇರವಾಗಿ ಕಾರ್ಯನಿರ್ವಹಿಸುವ ಏಮ್ಸ್ ಮತ್ತು ಜೆಐಪಿಎಂಇಆರ್  ಗೆ ಸಂಬಂಧಿಸಿದಂತೆ, ಪ್ರವೇಶ ಪರೀಕ್ಷೆಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುತ್ತದೆ ಮತ್ತು ಅದು ನೀಟ್ ಪರೀಕ್ಷೆಗಳಿಗಿಂತಲೂ ಕಠಿಣವಾಗಿದೆ. ಆದರೆ ನ್ಯಾಷನಲ್ ಮೆಡಿಕಲ್ ಕಮಿಷನ್ (ಎನ್‌ಎಂಸಿ) - ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾವನ್ನಾಗಿ ಬದಲಿಸುವ ನಿರ್ಧಾರ ಕೈಗೊಂಡಿದ್ದು ಇದೀಗ ಕೇಂದ್ರ ಆರೋಗ್ಯ ಸಚಿವಾಲಯವು ಇತರ ಎರಡು ಪ್ರವೇಶ ಪರೀಕ್ಷೆಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ.

"ಮುಂದಿನ ಶೈಕ್ಷಣಿಕ ಅಧಿವೇಶನದಿಂದ ಭಾರತದ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ನೀಟ್  ಪರೀಕ್ಷೆಯ ಅಂಕಗಳು ಮಾನದಂಡವಾಗಿರಲಿದೆ." ಎಂದು ಆರೋಗ್ಯ ಸಚಿವಾಲಯದ ವೈದ್ಯಕೀಯ ಶಿಕ್ಷಣ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ದೇಶದಲ್ಲಿ ಈಗ ಸುಮಾರು 15 ಏಮ್ಸ್ ಕಾಲೇಜುಗಳಿದ್ದು ಇದು ಪದವಿಪೂರ್ವ ಕೋರ್ಸ್‌ಗಳನ್ನು ನೀಡುತ್ತದೆ.ಇದರಲ್ಲಿ ಪ್ರಸ್ತುತ ಸುಮಾರು  1,500 ಎಂಬಿಬಿಎಸ್ ಸೀಟುಗಳಿದೆ. ಆದರೆ ಮುಂದಿನ ಒಂದು ವರ್ಷದಲ್ಲಿ ಅಂತಹ ಮೂರು ಸಂಸ್ಥೆಗಳನ್ನು ಪ್ರಾರಂಭಿಸಲು ಸರ್ಕಾರ ಉದ್ದೇಶಿಸಿದೆ.

ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ಕೇವಲ ಒಂದು ಪ್ರವೇಶ ಪರೀಕ್ಷೆಯೊಂದಿಗೆ ಈ ಯೋಜನೆ ಬರಲಿದ್ದು ವಿಶೇಷವಾಗಿ ವಿವಿಧ ನಗರಗಳಲ್ಲಿ ಎರಡನೇ ತಲೆಮಾರಿನ ಏಮ್ಸ್ ಪ್ರಾರಂಭಿಸುವ ಯೋಜನೆ ಇದೆ, "ನೀಟ್ ಮೂಲಕ ಪ್ರವೇಶಕ್ಕಾಗಿ ಸುಮಾರು 85,000 ಎಂಬಿಬಿಎಸ್ ಸೀಟುಗಳು ಈಗ ಲಭ್ಯವಿದೆ. ಮುಂದಿನ ವರ್ಷ ಈ ಸಂಖ್ಯೆಯನ್ನು 90,000 ಗಡಿ ದಾಟಿಸಲು ನಾವು ಯೋಜಿಸಿದ್ದೇವೆ" ಇನ್ನೊಬ್ಬ ಅಧಿಕಾರಿಯು ಹೇಳಿದ್ದಾರೆ.

SCROLL FOR NEXT