ದೇಶ

ಅಧಿಕೃತ ಬಂಗಲೆ ತೆರವು ಮಾಡದ 50 ಮಾಜಿ ಸಂಸದರು 

Nagaraja AB

ನವದೆಹಲಿ: ಹಿಂದಿನ ಲೋಕಸಭೆ ವಿಸರ್ಜನೆಯಾಗಿ 5 ತಿಂಗಳ ಕಳೆದರೂ 50 ಮಾಜಿ ಸಂಸದರು ಲುಟಿಯನ್ಸ್ ದೆಹಲಿಯಲ್ಲಿನ  ತಮ್ಮ ಅಧಿಕೃತ ಬಂಗಲೆಗಳನ್ನು ಇನ್ನೂ ತೆರವುಗೊಳಿಸಿಲ್ಲ

ಸಾರ್ವಜನಿಕ ಅವರಣ ಅತಿಕ್ರಮಣ ಕಾಯ್ದೆಯಡಿಯಲ್ಲಿ  ತ್ವರತಿಗತಿಯಲ್ಲಿ ಹೊರಹಾಕಲು ಅವರ  ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. 

ಮೂರು ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಬಂಗಲೆ ಖಾಲಿ ಮಾಡದ ಮಾಜಿ ಸಂಸದರಿಗೆ ಸರ್ಕಾರ ಶೋಕಾಸ್ ನೋಟಿಸ್ ನೀಡಿದೆ.  50 ಮಾಜಿ ಸಂಸದರು ತಮ್ಮ ಅಧಿಕೃತ ಬಂಗಲೆಗಳನ್ನು ಖಾಲಿ ಮಾಡಿಲ್ಲ. ಕೆಲ ದಿನಗಳಲ್ಲಿ ಬಂಗಲೆಗಳನ್ನು ತೆರವುಗೊಳಿಸದಿದ್ದಲ್ಲಿ ಬಲವಂತದಿಂದ ತೆರವುಗೊಳಿಸಬೇಕಾಗುತ್ತದೆ  ಎಂದು ಎಚ್ಚರಿಕೆ ನೀಡಲಾಗಿದೆ. 

200 ಮಾಜಿ ಸಂಸದರು ಒಂದು ವಾರದೊಳಗೆ ಬಂಗಲೆಗಳನ್ನು ಖಾಲಿ ಮಾಡದಿದ್ದಲ್ಲೀ ವಿದ್ಯುತ್, ನೀರು ಹಾಗೂ ಅನಿಲ ಪೂರೈಕೆ ಸರಬರಾಜನ್ನು ಸ್ಥಗಿತಗೊಳಿಸಲಾಗುವುದು ಎಂದು ಸಿಆರ್ ಪಾಟೀಲ್ ನೇತೃತ್ವದ ಲೋಕಸಭಾ ವಸತಿ ಸಮಿತಿ ಆಗಸ್ಟ್ 19 ರಂದು ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆ ಹೊರತಾಗಿಯೂ ಬಹುತೇಕ ಸಂಸದರು ಬಂಗಲೆಗಳನ್ನು ತೆರವು ಮಾಡಿಲ್ಲ. 

ನಿಯಮಗಳ ಪ್ರಕಾರ ಹಿಂದಿನ ಲೋಕಸಭೆ ವಿಸರ್ಜನೆಗೊಂಡ ಒಂದು ತಿಂಗಳೊಳಗೆ ಮಾಜಿ ಸಂಸದರು ತಮ್ಮ ಅಧಿಕೃತ ನಿವಾಸಗಳನ್ನು ತೆರವುಗೊಳಿಸಬೇಕಾಗುತ್ತದೆ. ಮೋದಿ ನೇತೃತ್ವದಲ್ಲಿ ಸರ್ಕಾರ ಎರಡನೇ ಬಾರಿಗೆ ಅಸ್ತಿತ್ವಕ್ಕೆ ಬಂದ ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೇ 25 ರಂದು 16 ನೇ ಲೋಕಸಭೆಯನ್ನು ವಿಸರ್ಜಿಸಿದ್ದರು.
 

SCROLL FOR NEXT