ದೇಶ

'ಕಾಂಗ್ರೆಸ್'ನ ಅತಿದೊಡ್ಡ ಸಮಸ್ಯೆ ಎಂದರೆ ನಾಯಕನ ಪಲಾಯನವಾದ': ರಾಹುಲ್ ವಿರುದ್ಧ ಸಲ್ಮಾನ್ ಖುರ್ಶೀದ್ ವಾಗ್ದಾಳಿ

Vishwanath S

ನವದೆಹಲಿ: ಕಾಂಗ್ರೆಸ್ ನ ಅತಿದೊಡ್ಡ ಸಮಸ್ಯೆ ಎಂದರೆ ಅದರ ನಾಯಕನ ಪಲಾಯನವಾದ ಎಂದು ಹೇಳಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸಲ್ಮಾನ್ ಖುರ್ಶೀದ್ ವಾಗ್ದಾಳಿ ನಡೆಸಿದ್ದಾರೆ. 

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಬಹು ದೊಡ್ಡ ಸವಾಲುಗಳಿವೆ. ಇನ್ನು ಹಲವು ರಾಜ್ಯ ಚುನಾವಣೆಗಳು ಬರುತ್ತಿದ್ದು ಅವುಗಳಲ್ಲಿ ಗೆಲ್ಲಲು ಅಥವಾ ತನ್ನದೇ ಆದ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗದಿರುವ ಹಂತದಲ್ಲಿ ಪಕ್ಷದ ಹೋರಾಟ ನಡೆಯುತ್ತಿವೆ ಎಂದು ಪ್ರಮುಖ ವಿರೋಧ ಪಕ್ಷದ ಕಾಂಗ್ರೆಸ್ ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಹೇಳುತ್ತಾರೆ.

ಮೇನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿನ ಹೀನಾಯ ಸೋಲಿನ ಬಳಿಕ ಅದರಿಂದ ಹೊರಬರಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿಂದ ಪಕ್ಷವು ತೀವ್ರತೆಯನ್ನು ಎದುರಿಸುತ್ತಿದೆ ಎಂದು ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ಚುನಾವಣೆಯಲ್ಲಿ 542 ಸಂಸದೀಯ ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳನ್ನು ಗೆದ್ದಿದೆ, ಪ್ರಧಾನಿ ನರೇಂದ್ರ ಮೋದಿಯವರ ಭಾರತೀಯ ಜನತಾ ಪಕ್ಷ ಗೆದ್ದ 303 ಸ್ಥಾನಗಳಿಗೆ ಹೋಲಿಸಿದರೆ ತೀವ್ರ ಹಿನ್ನಡೆಯಾಗಿದೆ. ಈ ಸೋಲಿನಿಂದ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ರಾಜೀನಾಮೆ ನೀಡಿದರು. ಅದಾದ ನಂತರ ತಾಯಿ ಸೋನಿಯಾ ಗಾಂಧಿ ಮಧ್ಯಂತರ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 

ಅಕ್ಟೋಬರ್ 21ರಂದು ಉತ್ತರದಲ್ಲಿ ಹರಿಯಾಣ ಮತ್ತು ಪಶ್ಚಿಮದಲ್ಲಿ ಮಹಾರಾಷ್ಟ್ರದಲ್ಲಿ ನಡೆಯುವ ರಾಜ್ಯ ಚುನಾವಣೆಗಳಲ್ಲಿ ಪಕ್ಷವು ನಿರ್ಣಾಯಕ ಪರೀಕ್ಷೆಗಳನ್ನು ಎದುರಿಸುತ್ತಿದೆ. ಹರಿಯಾಣದಲ್ಲಿ ಪಕ್ಷದ ಮುಖ್ಯಸ್ಥರು ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಪಕ್ಷದ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯಗಳು ತಲೆ ತೋರಿದೆ. ಇವುಗಳನ್ನು ಸೂಕ್ತ ರೀತಿಯಲ್ಲಿ ನಿರ್ಧರಿಸುವ ಯೋಗ್ಯ ಮುಖಂಡ ಪಕ್ಷದಲ್ಲಿ ಕಾಣಿಸುತ್ತಿಲ್ಲ ಎಂದರು. 

SCROLL FOR NEXT