ದೇಶ

ಅಯೋಧ್ಯ ವಿವಾದ: ಹಿಂದೂಗಳಿಗೆ ಭೂಮಿ ' ಗಿಫ್ಟ್' ನೀಡಲು ಮುಸ್ಲಿಂ ಬೌದ್ಧಿಕ ಗುಂಪು ಸಲಹೆ 

Nagaraja AB

ನವದೆಹಲಿ: ಅಯೋಧ್ಯ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳಲು  ಮುಸ್ಲಿಂ ಸಮುದಾಯದ ಬೌದ್ಧಿಕ ಗುಂಪೊಂದು ಒಲವು ತೋರಿಸಿದ್ದು,  ಮುಸ್ಲಿಂರು ವಿವಾದಿತ ಜಾಗವನ್ನು ಸ್ನೇಹಪೂರ್ವಕವಾಗಿ ಕೇಂದ್ರ ಸರ್ಕಾರಕ್ಕೆ ನೀಡಿದರೆ ದೇಶದಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದೆ. 

ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ಭೂ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳುವ ಸಂಬಂಧ ನಿನ್ನೆ ನಿರ್ಣಯವೊಂದನ್ನು ಕೈಗೊಳ್ಳಲಾಗಿದೆ ಎಂದು ನೂತನ ಸ್ಥಾಪಿತ ಶಾಂತಿಗಾಗಿ ಭಾರತೀಯರು ಮುಸ್ಲಿಂರು ವೇದಿಕೆ  ಸಂಚಾಲಕ ಕಲಾಂ ಖಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ನ್ಯಾಯಾಲಯದ ಹೊರಗಡೆ ವಿವಾದವನ್ನು ಬಗೆಹರಿಸಿಕೊಳ್ಳುವುದರಿಂದ ಹಿಂದೂ- ಮುಸ್ಲಿಂರು ಸಂತೋಷದಿಂದ ಇರಬಹುದು, ಯಾವುದೇ ಸಮುದಾಯವು ಆಕ್ರಮಣಕಾರಿ ಭಾವನೆ ತಾಳಬಾರದು ಎಂದರು. 

ಹಿಂದೂ- ಮುಸ್ಲಿಂ ನಡುವಿನ ಸಂಬಂಧಕ್ಕೆ ಶತಮಾನದ ಇತಿಹಾಸವಿದೆ. ಜಾತ್ಯತೀತ ಹಾಗೂ ಪ್ರಜಾಸತಾತ್ಮಕ ತತ್ವಗಳನ್ನು ಗಮನದಲ್ಲಿಟ್ಟುಕೊಂಡು ವಿವಾದಿತ ಜಾಗವನ್ನು ಸೌಹಾರ್ದತೆಯ ಭಾವನೆಯೊಂದಿಗೆ ಸುಪ್ರೀಂಕೋರ್ಟ್ ಮೂಲಕ ಕೇಂದ್ರ ಸರ್ಕಾರಕ್ಕೆ ಹಸ್ತಂತರಿಸಬೇಕು ಎಂದು ಅವರು ಮುಸ್ಲಿಂ ಸಮುದಾಯಕ್ಕೆ  ಸಲಹೆ ನೀಡಿದರು.

SCROLL FOR NEXT