ದೇಶ

ಪ್ರಧಾನಿ ಮೋದಿಗಾಗಿ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರಿಂದ ದೇವಾಲಯ ನಿರ್ಮಾಣ

Manjula VN

ಮುಜಾಫರ್ನಗರ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗಾಗಿ ಮುಸ್ಲಿಂ ಮಹಿಳೆಯರ ಗುಂಪೊಂದು ಉತ್ತರಪ್ರದೇಶದಲ್ಲಿ ದೇವಾಲಾಯ ನಿರ್ಮಾಣ ಮಾಡಲು ಮುಂದಾಗಿದೆ. 

ರುಬಿ ಘಜ್ನಿ ಎಂಬ ಮುಸ್ಲಿಂ ಮಹಿಳೆಯ ನೇತೃತ್ವದಲ್ಲಿ ಗುಂಪೊಂದು ಪ್ರಧಾನಿ ಮೋದಿಯವರಿಗಾಗಿ ದೇವಾಲಾಯ ನಿರ್ಮಾಣ ಮಾಡುತ್ತಿದೆ. 

ಮುಸ್ಲಿಂ ಮಹಿಳೆಯರಿಗಾಗಿ ಪ್ರಧಾನಿ ಮೋದಿಯವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ತ್ರಿವಳಿ ತಲಾಖ್ ನಿಷೇಧಿಸುವ ಮೂಲಕ ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ. ಉಚಿತ ಮನೆ ಹಾಗೂ ಎಲ್'ಪಿಜಿ ಸಂಪರ್ಕವನ್ನು ನೀಡಿದ್ದಾರೆ. ಇದಕ್ಕಿಂತಲೂ ಹೆಚ್ಚು ಇನ್ನೇನು ಬೇಕು? ಎಂದು ಮಹಿಳೆಯರು ಹೇಳಿದ್ದಾರೆ. 

ಪ್ರಧಾನಿ ಮೋದಿಯವರಿಗೆ ಇಡೀ ವಿಶ್ವವೇ ಗೌರವ ನೀಡುತ್ತಿದೆ. ಇದೀಗ ಮಾತೃಭೂಮಿಯಲ್ಲಿಯೇ ಅವರಿಗೆ ಗೌರವ ನೀಡಲು ನಿರ್ಧರಿಸಲಾಗಿದೆ. ದೇವಾಲಯ ನಿರ್ಮಾಣ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ ಮನವಿ ಸಲ್ಲಿಸಲಾಗಿದೆ. ನಮ್ಮ ಸ್ವಂತ ಹಣದಿಂದಲೇ ದೇವಾಲಯ ನಿರ್ಮಾಣ ಮಾಡುತ್ತೇವೆ. ಈ ಮೂಲಕ ಮುಸ್ಲಿಂ ಮಹಿಳೆಯರ ಬೆಂಬಲ ಪ್ರಧಾನಿ ಮೋದಿಯವರಿಗೆ ಸಂಪೂರ್ಣವಾಗಿದೆ ಎಂಬ ಸಂದೇಶವನ್ನು ಸಾರುತ್ತಿದ್ದೇವೆ. ಮೋದಿಯವರಿಗೆ ಮುಸ್ಲಿಂ ವಿರೋಧಿ ಎಂಬ ಬಿರುದು ನೀಡಲು ಯಾವುದೇ ಕಾರಣಗಳಿಲ್ಲ ಎಂದು ತಿಳಿಸಿದ್ದಾರೆ. 

SCROLL FOR NEXT