ದೇಶ

'ಒಂದೇ ದಿನ ಮೂರು ಸಿನಿಮಾಗಳ ಕಲೆಕ್ಷನ್ 120 ಕೋಟಿ: ದೇಶದ ಆರ್ಥಿಕತೆ ಸುಭದ್ರ-ರವಿಶಂಕರ್ ಪ್ರಸಾದ್ 

Nagaraja AB

ಮುಂಬೈ:  ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮೂರು ಸಿನಿಮಾಗಳ 120 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಉದಾಹರಣೆಯಾಗಿ ನೀಡುವ ಮೂಲಕ ದೇಶದ ಆರ್ಥಿಕತೆ ಉತ್ತಮವಾಗಿದೆ. ಆರ್ಥಿಕ ಹಿಂಜರಿತ ಇಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ದೇಶದ ಆರ್ಥಿಕತೆ ಬಗ್ಗೆ ಭಯಪಡಬೇಕಾದ ಅಗತ್ಯವಿಲ್ಲ. ದೇಶದ ಆರ್ಥಿಕತೆ ಸದೃಢವಾಗಿದೆ. ವಿದೇಶಿ ನೇರ ಹೂಡಿಕೆ ಶೇ.20 ರಷ್ಟು ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ 16. 3 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಹೂಡಿಕೆಯಾಗಿದೆ ಎಂದರು.

ತಮ್ಮ ಹೇಳಿಕೆಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಉದಾಹರಣೆಯನ್ನಾಗಿ ನೀಡಿದ ರವಿಶಂಕರ್ ಪ್ರಸಾದ್,  ಅಕ್ಟೋಬರ್ 2 ರಂದು ಬಿಡುಗಡೆಯಾದ ಮೂರು ಚಿತ್ರಗಳು ಒಂದೇ ದಿನ 120 ಕೋಟಿ ಕಲೆಕ್ಷನ್  ಮಾಡಿವೆ ಎಂದ ಮೇಲೆ ದೇಶದಲ್ಲಿ ಆರ್ಥಿಕ ಹಿಂಜರಿತ ಇಲ್ಲ ಎಂದರು. ಅಲ್ಲದೇ, ದೇಶದಲ್ಲಿ 120 ಕೋಟಿ ಆದಾಯ ಬರುತ್ತದೆ ಅಂದಮೇಲೆ ದೇಶದ ಪ್ರಗತಿ ಉತ್ತಮವಾಗಿದೆ ಎಂದರ್ಥ ಎಂದು ಸಮರ್ಥಿಸಿಕೊಂಡರು.

ಹಣದುಬ್ಬರ ಪ್ರಮಾಣ ಕಡಿಮೆಯಾಗಿದೆ. ತೆರಿಗೆದಾರರ ಸಂಖ್ಯೆಯ ದ್ವಿಗುಣವಾಗಿದೆ. ಒಟ್ಟಾರೆ ಆದಾಯ ತೆರಿಗೆ ಸಂಗ್ರಹದಲ್ಲಿ ಎರಡು ಪಟ್ಟು ಹೆಚ್ಚಾಗಿದೆ. ಜಾಗತಿಕವಾಗಿ ಆರ್ಥಿಕ ಹಿಂಜರಿತವಿದ್ದರೂ ಭಾರತದ ಆರ್ಥಿಕತೆ ಬೆಳವಣಿಗೆ ದರ ಶೇ. 6 ಕ್ಕಿಂತಲೂ ಹೆಚ್ಚಾಗಿದೆ ಎಂದು ತಿಳಿಸಿದರು.

SCROLL FOR NEXT