ದೇಶ

ಮೋದಿ - ಕ್ಸಿ ಅನೌಪಚಾರಿಕ ಶೃಂಗಸಭೆ ಅಂತ್ಯ: ನೇಪಾಳಕ್ಕೆ ತೆರಳಿದ ಚೀನಾ ಅಧ್ಯಕ್ಷ

Lingaraj Badiger

ಚೆನ್ನೈ: ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಅನೌಪಚಾರಿಕ ಶೃಂಗಸಭೆ ಬಳಿಕ ಶನಿವಾರ ನೇಪಾಳಕ್ಕೆ ತೆರಳಿದ್ದಾರೆ.

ನಿನ್ನೆ ಚೆನ್ನೈಗೆ ಆಗಮಿಸಿದ ಚೀನಾ ಅಧ್ಯಕ್ಷರಿಗೆ ತಮಿಳುನಾಡು ಸರ್ಕಾರ ಅದ್ಧೂರಿ ಸ್ವಾಗತ ನೀಡಿತ್ತು.  ಬಳಿಕ ಸಂಜೆ ಮಹಾಬಲಿಪುರಂಗೆ ತೆರಳಿದ ಚೀನಾ ಅಧ್ಯಕ್ಷರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು.

ಕ್ಸಿ ಜಿನ್ ಪಿಂಗ್ ಅವರು ಅನೌಪಚಾರಿಕ ಶೃಂಗಸಭೆಯ ಬಳಿಕ ಇಂದು ನೇಪಾಳಕ್ಕೆ ತೆರಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ಸಿ ನಡುವೆ ನಡೆದ ಎರಡನೇ ಅನೌಪಚಾರಿಕ ಶೃಂಗ ಸಭೆ ಇದಾಗಿದೆ. ಕಳೆದ ವರ್ಷ ಚೀನಾದ ವುಹಾನ್ ನಲ್ಲಿ ಉಭಯ ನಾಯಕರ ನಡುವೆ ಮೊದಲ ಮಾತುಕತೆ ನಡೆದಿತ್ತು.

SCROLL FOR NEXT