ಚಂಡೀಗರ್:: ಪಂಜಾಬ್‌ನ ಇಂಡೋ-ಪಾಕಿಸ್ತಾನ ಗಡಿಯುದ್ದಕ್ಕೂ ಅನೇಕ ಡ್ರೋನ್ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶದಲ್ಲಿ 1,000 ಅಡಿಗಿಂತ ಕಡಿಮೆ ಹಾರಾಟ ನಡೆಸುವ ಡ್ರೋನ್‌ಗಳನ್ನು ಹೊಡೆದುರುಳಿಸಲು ಭದ್ರತಾ ಪಡೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ.
ಪೋಲೀಸ್ ಮೂಲಗಳು ಹೇಳಿರುವಂತೆ ಶೀಘ್ರದಲ್ಲೇ ಅಂತರರಾಷ್ಟ್ರೀಯ ಗಡಿಯಲ್ಲಿ ನಿಯೋಜಿಸಲಾಗಿರುವ ಭದ್ರತಾ ಪಡೆಗಳಿಗೆ 1,000 ಅಡಿ ಮತ್ತು ಅದಕ್ಕಿಂತ ಕಡಿಮೆ ಎತ್ತರದಲ್ಲಿ ಹಾರುವ ಯಾವುದೇ ಡ್ರೋನ್ ಅನ್ನು ಹೊಡೆದುರುಳಿಸಲು ಅನುಮತಿಸಲಾಗುವುದು
"ಈ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ, ನಾವು ಇದರ ಬಗ್ಗೆ ತಿಳಿದುಕೊಂಡಿದ್ದೇವೆ ಮತ್ತು ಶೀಘ್ರದಲ್ಲೇ ಈ ನಿಟ್ಟಿನಲ್ಲಿಅಧಿಕೃತ ಆದೇಸ ಪಡೆಯುತ್ತೇವೆ ಎನ್ನುವ ನಿರೀಕ್ಷೆ ನಮಗಿದೆ.ಇದರಿಂದ ಭವಿಷ್ಯದಲ್ಲಿ ಡ್ರೋನ್ ಹಾರಾಟ ಅತ್ಯಂತ ಕೆಳಮಟ್ಟದಲ್ಲಿದ್ದದ್ದಾದರೆ ನಾವದನ್ನು ಹೊಡೆದುರುಳಿಸಲಿದ್ದೇವೆ." ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಕಳೆದ ವಾರ, ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಭಾರತೀಯ ಭೂಪ್ರದೇಸ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಪತ್ತೆಹಚ್ಚಲಾಗಿದೆ.ಡಿ ಭದ್ರತಾ ಪಡೆ (ಬಿಎಸ್‌ಎಫ್), ಪಂಜಾಬ್ ಪೊಲೀಸ್ ಮತ್ತು ಇತರ ಭದ್ರತಾ ಸಂಸ್ಥೆಗಳು ಈ ಡ್ರೋನ್ ಪತ್ತೆ ನಂತರ ಸಾಕಷ್ಟು ಪರಿಶೀಲನೆ ನಡೆಸಿದೆ. ಇದಕ್ಕೆ ಹಿಂದೆ ಅಕ್ಟೋಬರ್ 8 ಮತ್ತು 9 ರಂದು ಮತ್ತೊಂದು ಪಾಕಿಸ್ತಾನಿ ಡ್ರೋನ್ ಅನ್ನು ಭಾರತೀಯ ಪ್ರದೇಶದಲ್ಲಿ ಎರಡು ಬಾರಿ ಪತ್ತೆ ಮಾಡಲಾಗಿದೆ. ಘಟನೆಯ ನಂತರ, ಮಂಗಳವಾರ ನಡೆದ ಧ್ವಜ ಸಭೆಯಲ್ಲಿ ಪಾಕಿಸ್ತಾನ ರೇಂಜರ್ಸ್ ಜತೆ ನಡೆದ ಮಾತುಕತೆಯ ವೇಳೆ ಭಾರತ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.