ದೇಶ

ರಾಮಜನ್ಮಭೂಮಿ ತೀರ್ಪು ನಿರೀಕ್ಷೆ: ಡಿ.10 ವರೆಗೆ ಅಯೋಧ್ಯೆಯಲ್ಲಿ ಸೆಕ್ಷನ್ 144 ಜಾರಿ! 

Srinivas Rao BV

ಅಯೋಧ್ಯೆ: ರಾಮಜನ್ಮಭೂಮಿ ತೀರ್ಪು ಶೀಘ್ರವೇ ಬರುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಯೋಧ್ಯೆಯಲ್ಲಿ ಡಿ.10 ವರೆಗೆ ಸೆಕ್ಷನ್ 144 ಜಾರಿಗೊಳಿಸಿದೆ. 

ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂಜು ಕುಮಾರ್ ಝಾ ಈ ಬಗ್ಗೆ ಮಾಹಿತಿ ನೀಡಿದ್ದು, ಆ.31 ರಿಂದ ಅಯೋಧ್ಯೆಯಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಆದರೆ ಅದು ಅಕ್ರಮವಾಗಿ ಒಂದೆಡೆ ಜನ ಜಮಾವಣೆಯಾಗುವುದನ್ನಷ್ಟೇ ತಡೆಯುವ ಆದೇಶವಾಗಿತ್ತು. ಈಗ ಜನರ ಸುರಕ್ಷತೆಗಾಗಿ ಅಯೋಧ್ಯೆ ರಾಮಜನ್ಮಭೂಮಿ ತೀರ್ಪಿನ ನಿರೀಕ್ಷೆಯನ್ನೂ ನಮ್ಮ ಆದೇಶದಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ಹೇಳಿದ್ದಾರೆ. 

ಜಿಲ್ಲಾ ಮ್ಯಾಜಿಸ್ಟ್ರೇಟ್ ನೀಡಿರುವ ಮಾಹಿತಿಯ ಪ್ರಕಾರ ಡ್ರೋಣ್ ಬಳಕೆ, ಜಿಲ್ಲೆಯಲ್ಲಿ ಚಿತ್ರೀಕರಣ ಮಾಡುವುದು ಪಟಾಕಿ ಮಾರಾಟ, ಖರೀದಿ, ಮಾನವ ರಹಿತ ವೈಮಾನಿಕ ವಾಹನಗಳನ್ನು ದಂಡಾಧಿಕಾರಿ ಅನುಮತಿ ಇಲ್ಲದೇ ಬಳಸುವುದಕ್ಕೆ ಜಿಲ್ಲೆಯಾದ್ಯಂತ ನಿರ್ಬಂಧ ವಿಧಿಸಲಾಗಿದೆ. 

ದೀಪಾವಳಿ ಸಂದರ್ಭದಲ್ಲೂ ಅನುಮತಿ ಇಲ್ಲದೇ ಪಟಾಕಿ ಸಿಡಿಸುವುದು 

SCROLL FOR NEXT