ದೇಶ

ಸಾವರ್ಕರ್​ಗೆ ಭಾರತ ರತ್ನ,ದೇಶವನ್ನು ದೇವರೇ ಕಾಪಾಡಬೇಕು- ಕಾಂಗ್ರೆಸ್ 

Nagaraja AB

ನವದೆಹಲಿ: ಹಿಂದುತ್ವ ಚಿಂತಕ ವಿ. ಡಿ. ಸಾವರ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿಗೆ ಕೇಂದಕ್ಕೆ ಶಿಫಾರಸು ಮಾಡುವುದಾಗಿ  ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ಮಹಾರಾಷ್ಟ್ರ ಬಿಜೆಪಿ ಘಟಕದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ

. ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಸಂದರ್ಭದಲ್ಲಿ ಈ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಪರಿಗಣಿಸಿದರೆ ದೇಶವನ್ನು ದೇವರೇ ಕಾಪಾಡಬೇಕಾಗಿದೆ ಎಂದು ಕಾಂಗ್ರೆಸ್ ಹೇಳಿದೆ. 

ಗುಜರಾತ್‌ನ ಕೆಲವು ಶಾಲೆಗಳ ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಯನ್ನು ಉಲ್ಲೇಖಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ,  ಮಹಾತ್ಮ ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪರೀಕ್ಷೆಗಳಲ್ಲಿ ಪ್ರಶ್ನೆ ಕೇಳುವ ರಾಷ್ಟ್ರದಲ್ಲಿ ಏನು ಬೇಕಾದರೂ ಸಾಧ್ಯವಾಗಬಹುದು ಎಂದರು. 

ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ಸಾವರ್ಕರ್ ಕ್ರಿಮಿನಲ್ ವಿಚಾರಣೆಯನ್ನು ಎದುರಿಸಿದ್ದರು, ನಂತರ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ತಿವಾರಿ ಹೇಳಿದರು.

ಲೇಖನವೊಂದನ್ನು ಉಲ್ಲೇಖಿಸಿ ಮಾತನಾಡಿದ ತಿವಾರಿ, ಮಹಾತ್ಮ ಗಾಂಧಿ ಅವರ ಪ್ರಕರಣದಲ್ಲಿ ಸಾವರ್ಕರ್  ಹಾಗೂ ಅವರ ಗುಂಪಿನಿಂದ ಕೊಲೆಗೆ ಸಂಚು ರೂಪಿಸಿದ್ದ ಅಂಶಗಳನ್ನು ಕಪೂರ್ ಆಯೋಗವು ಹೇಳಿತ್ತು. ಇದು ಸರಿಯಾಗಿಯೇ ಇದೆ. ಮಹಾತ್ಮ ಗಾಂಧಿ ಅವರ 150 ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ತಿವಾರಿ ಒತ್ತಾಯಿಸಿದ್ದಾರೆ.

SCROLL FOR NEXT