ದೇಶ

ಪಂಜಾಬ್​​ನಲ್ಲಿ ಮತ್ತೊಂದು ಪಾಕ್ ಡ್ರೋನ್ ಹಾರಾಟ, ಆತಂಕ ಸೃಷ್ಟಿ!

Vishwanath S

ಫಿರೋಜ್ ಪೇರರ್(ಪಂಜಾಬ್): ಪಂಜಾಬ್​​ನಲ್ಲಿ ಪಾಕಿಸ್ತಾನದ ಮತ್ತೊಂದು ಡ್ರೋನ್ ಹಾರಾಟ್ ನಡೆಸಿರುವುದು ಕಂಡ ಬಂದಿದೆ.

ಪಂಜಾಬ್ ನ ಫಿರೋಜ್ ಪೇರರ್ ಜಿಲ್ಲೆಯ ಹಜಾರೆ ಸಿಂಗ್ ವಾಲಾ ಎಂಬದಲ್ಲಿ ಅಕ್ಟೋಬರ್ 14ರಂದು ಪಾಕ್ ಡ್ರೋನ್ ಕಾಣಿಸಿಕೊಂಡಿದ್ದಾಗಿ ಗಡಿ ಭದ್ರತಾ ಪಡೆ(ಬಿಎಸ್ಎಫ್) ಆರೋಪಿಸಿದೆ. 

370ನೇ ವಿಧಿ ರದ್ದತಿ ನಂತರ ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಮುಂದಾಗಿರುವ ಪಾಕಿಸ್ತಾನ ತನ್ನ ಡ್ರೋನ್ ಗಳ ಮೂಲಕ ಭಾರತದಲ್ಲಿರುವ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ರವಾನಿಸುತ್ತಿದೆ ಎನ್ನಲಾಗಿದೆ. 

ಇನ್ನು ಆ್ಯಂಟಿ ಡ್ರೋನ್ ಟೆಕ್ನಾಲಜಿ ಬಳಸಿಕೊಂಡು ಭಾರತ ಡ್ರೋನ್ ಗಳ ಪತ್ತೆ ಮತ್ತು ಹೊಡೆದುರುಳಿಸುವ ಕೆಲಸಕ್ಕೆ ಮುಂದಾಗಲಿದೆ.

SCROLL FOR NEXT