ದೇಶದ ಗೋ ಸಂತತಿಯಲ್ಲಿ ಶೇ. 18 ರಷ್ಟು ಹೆಚ್ಚಳ-ವರದಿ
2012ರಿಂದಲೂ ದೇಶದ ಗೋ ಸಂತತಿಯಲ್ಲಿ ಶೇ. 18 ರಷ್ಟು ಹೆಚ್ಚಳವಾಗಿದೆ. 20 ನೇ ಜಾನುವಾರು ಎಣಿಕೆ ವರದಿಯ ಪ್ರಕಾರ, ಭಾರತದಲ್ಲಿನ ಗೋವುಗಳ ಸಂಖ್ಯೆ 14.51 ಕೋಟಿಯಷ್ಟಾಗಿದೆ.
ನವದೆಹಲಿ: 2012ರಿಂದಲೂ ದೇಶದ ಗೋ ಸಂತತಿಯಲ್ಲಿ ಶೇ. 18 ರಷ್ಟು ಹೆಚ್ಚಳವಾಗಿದೆ. 20 ನೇ ಜಾನುವಾರು ಎಣಿಕೆ ವರದಿಯ ಪ್ರಕಾರ, ಭಾರತದಲ್ಲಿನ ಗೋವುಗಳ ಸಂಖ್ಯೆ 14.51 ಕೋಟಿಯಷ್ಟಾಗಿದೆ.
ಹಿಂದಿನ ಎಣಿಕೆಗೆ ಹೋಲಿಸಿದರೆ ಇತ್ತೀಚಿನ ವರದಿಯಲ್ಲಿ ಎಲ್ಲಾ ಜಾನುವಾರುಗಳ ಸಂತತಿಯು ಶೇಕಡಾ 4.6 ರಷ್ಟು ಹೆಚ್ಚಳವಾಗಿದ್ದು 53.57 ಕೋಟಿಗೆ ತಲುಪಿದೆ.
ಕೇಂದ್ರ ಪಶುಸಂಗೋಪನಾ ಸಚಿವಾಲಯ ಇಂದು ಬಿಡುಗಡೆ ಮಾಡಿರುವ 20ನೇ ಜಾನುವಾರ ಎಣಿಕೆ ವರದಿಯಲ್ಲಿ ವಿಸ್ತೃತ ಮಾಹಿತಿಯನ್ನು ನೀಡಲಾಗಿದೆ. ಈ ಬಾರಿ ಹೊಸ ತಂತ್ರಜ್ಞಾನದ ಮೂಲಕ ಜಾನುವಾರುಗಳ ಎಣಿಕೆ ಮಾಡಲಾಗಿದೆ ಎಂಬುದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ಪ್ರತಿ ಐದು ವರ್ಷಕ್ಕೊಮ್ಮೆ ದೇಶದಲ್ಲಿ ಜಾನುವಾರುಗಳನ್ನು ಎಣಿಕೆ ಮಾಡಲಾಗುತ್ತದೆ. 1919-20ರಲ್ಲಿ ಮೊದಲ ಬಾರಿಗೆ ಜಾನುವಾರಗಳು ಎಣಿಕೆ ಮಾಡಲಾಗಿತ್ತು. ನಂತರ 1924-25 ರಲ್ಲಿ ಎರಡನೇ ಬಾರಿಗೆ ಮಾಡಲಾಗಿತ್ತು, ಸ್ವಾತಂತ್ರ್ಯ ನಂತರ 1951ರಲ್ಲಿ ನಂತರ ಪ್ರತಿ ವರ್ಷಕ್ಕೊಮ್ಮೆ ಜಾನುವಾರುಗಳ ಎಣಿಕೆ ಮಾಡಲಾಗುತ್ತಿದೆ.
ಪ್ರಸ್ತುತ 2017ರಲ್ಲಿ 20ನೇ ಕಂತಿನಲ್ಲಿ ಜಾನುವಾರಗಳ ಎಣಿಕೆ ನಡೆಯುತ್ತಿದೆ. ಇದಕ್ಕೂ ಹಿಂದೆ 2007-12ರಲ್ಲಿ ಜಾನುವಾರುಗಳ ಎಣಿಕೆ ಮಾಡಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.