ಆಯೋಧ್ಯೆ ವಿಚಾರಣೆ: ಅಂತಿಮ ದಿನದಂದು ಸುಪ್ರೀಂ ನಲ್ಲಿ ಹೈಡ್ರಾಮಾ, ಸಿಜೆಐ ಕೆಂಡಾಮಂಡಲ! 
ದೇಶ

ಆಯೋಧ್ಯೆ ವಿಚಾರಣೆ: ಅಂತಿಮ ದಿನದಂದು ಸುಪ್ರೀಂ ನಲ್ಲಿ ಹೈಡ್ರಾಮಾ, ಸಿಜೆಐ ಕೆಂಡಾಮಂಡಲ! 

ಅಯೋಧ್ಯೆಯ ರಾಮಜನ್ಮಭೂಮಿ -ಬಾಬ್ರಿಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ  ಬುಧವಾರ ವಿಚಾರಣೆಯ ಅಂತಿಮ ದಿನವಾಗಿದ್ದ ಕಾರಣ  ನಾಟಕೀಯ  ಸನ್ನಿವೇಶಗಳು ಕಂಡುಬಂದವು.

ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ -ಬಾಬ್ರಿಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ  ಬುಧವಾರ ವಿಚಾರಣೆಯ ಅಂತಿಮ ದಿನವಾಗಿದ್ದ ಕಾರಣ  ನಾಟಕೀಯ  ಸನ್ನಿವೇಶಗಳು ಕಂಡುಬಂದವು.

ತಮ್ಮ ವಾದಗಳಿಗೆ ಬೆಂಬಲವಾಗಿ ಹಿಂದೂ ಮಹಾ ಸಭಾ ವಕೀಲರು  ನ್ಯಾಯಾಲಯದಲ್ಲಿ  ಪ್ರದರ್ಶಿಸಿದ ಪುಸ್ತಕ  ಹಾಗೂ ನಕ್ಷೆ  ಕುರಿತು ವಿವಾದ ಸೃಷ್ಟಿಯಾಯಿತು. ಮಾಜಿ ಐಪಿಎಸ್ ಅಧಿಕಾರಿ  ಕಿಶೋರ್ ರಚಿಸಿರುವ ಅಯೋಧ್ಯೆ ರಿವಿಸಿಟೆಡ್ ಎಂಬ ಹೆಸರಿನ  ಪುಸ್ತಕವನ್ನು ಹಿಂದೂ ಮಹಾಸಭಾ ವಕೀಲ, ವಿಕಾಸ್ ಸಿಂಗ್ ನ್ಯಾಯಾಲಯದ ಮುಂದೆ  ಹಾಜರುಪಡಿಸಿದರು. ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್ ಧವನ್  ಪುಸ್ತಕ ಹಾಗೂ ನಕ್ಷೆಯನ್ನು ಹರಿದುಹಾಕಿದಾಗ ನ್ಯಾಯಾಲಯದಲ್ಲಿ ಕೆಲಕಾಲ ಗೊಂದಲ ಉಂಟಾಯಿತು. 1986 ರಲ್ಲಿ ರಚಿಸಲಾಗಿರುವ ಈ ಪುಸ್ತಕವನ್ನು ನ್ಯಾಯಾಲಯ ದಾಖಲೆಯನ್ನಾಗಿ ಪರಿಗಣಿಸುವುದಕ್ಕೆ  ರಾಜೀವ್  ಧವನ್ ಆಕ್ಷೇಪಿಸಿದರು. ಆದರೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಪುಸ್ತಕ ಮತ್ತು ನಕ್ಷೆಯನ್ನು ಹರಿದು ಹಾಕಿದ ಸುನ್ನಿ ವಕ್ಫ್ ಮಂಡಳಿಯ ವಕೀಲ ರಾಜೀವ್ ಧವನ್ ಅವರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  

ಪರಿಸ್ಥಿತಿ ಇದೇರೀತಿ ಮುಂದುವರಿದರೆ ತಾವು  ನ್ಯಾಯಾಲಯದಿಂದ  ಹೊರಹೋಗುವುದಾಗಿ  ಸಿಜೆಐ ಗೊಗೊಯ್ ಎಚ್ಚರಿಕೆಯನ್ನೂ ನೀಡಿದರು. ಒಂದು ಹಂತದಲ್ಲಿ ವಕೀಲರು ಮತ್ತು ಮುಖ್ಯ ನ್ಯಾಯಮೂರ್ತಿಗಳ ನಡುವೆ ವಾಗ್ವಾದ ನಡೆಯಿತು. ಇದೇ ವೇಳೆ ಹಿಂದೂ ಮಹಾಸಭಾ ವಕೀಲರ ನಡೆಯಿಂದ ತಮಗೆ ಅಸಮಾಧಾನವಾಗಿದ್ದು, ವಕ್ಫ್ ಮಂಡಳಿ ಪರ ವಾದ ಮಂಡಿಸುತ್ತಿರುವ ವಕೀಲರ ವಿರುದ್ಧ  ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.  ಮತ್ತೊಂದೆಡೆ, ಅಯೋಧ್ಯೆಯ ವಿವಾದಕ್ಕೆ ಸಂಬಂಧಿಸಿದಂತೆ  ಇಂದು ವಾದ ಪ್ರತಿವಾದ ಮುಗಿದಿದ್ದು, ಸುಪ್ರೀಂ ಕೋರ್ಟ್  ನೀಡಲಿರುವ ತೀರ್ಪಿನ   ಬಗ್ಗೆ ವ್ಯಾಪಕ ಕುತೂಹಲ ಕೆರಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT