ದೇಶ

ದೇಶಾದ್ಯಂತ ನೈಋತ್ಯ ಮುಂಗಾರು ಸಂಪೂರ್ಣ ಅಂತ್ಯ, ಈಶಾನ್ಯ ಮುಂಗಾರು ಮುಂದುವರೆಯಲಿದೆ

Lingaraj Badiger

ನವದೆಹಲಿ: ನಾಲ್ಕು ತಿಂಗಳ ನೈಋತ್ಯ ಮುಂಗಾರು ಅವಧಿಗೆ ಬುಧವಾರ ದೇಶಾದ್ಯಂತ ಅಧಿಕೃತಿವಾಗಿ ಅಂತ್ಯವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮುಂಗಾರು ಮಾರುತಗಳು ವಾಯುವ್ಯ ಭಾರತದಿಂದ ಹಿಂದೆ ಸರಿಯಲು ಆರಂಭಿಸಿದ ಎಂಟು ದಿನಗಳ ನಂತರ ಹವಾಮಾನ ಇಲಾಖೆ ನೈಋತ್ಯ ಮುಂಗಾರು ಸಂಪೂರ್ಣ ಅಂತ್ಯವಾಗಿದೆ ಎಂದು ಘೋಷಿಸಿದೆ. ಆದರೆ ಈಶಾನ್ಯ ಮುಂಗಾರು ಮುಂದುವರೆಯಲಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಕೇರಳದಲ್ಲಿ ಮಳೆಯಾಗಲಿದೆ ಎಂದು ಹೇಳಿದೆ.

ಈ ವರ್ಷ ಒಟ್ಟಾರೆ ದೇಶದಲ್ಲಿ ಸಾಮಾನ್ಯಕ್ಕಿಂತ ಶೇಕಡ 9 ರಷ್ಟು ಹೆಚ್ಚು ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

SCROLL FOR NEXT