ದೇಶ

ಹರ್ಯಾಣದ ಕಾಂಗ್ರೆಸ್ ಸರ್ಕಾರ 3 ಡಿ ಸರ್ಕಾರವಾಗಿತ್ತು: ಅಮಿತ್ ಶಾ

Srinivas Rao BV

ಹರ್ಯಾಣ: ಹರ್ಯಾಣದ ವಿಧಾನಸಭಾ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಈ ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಭುಪೇಂದರ್ ಸಿಂಗ್ ಹೂಡಾ ಸರ್ಕಾರದ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದ್ದು, ಭುಪೇಂದರ್ ಸಿಂಗ್ ಹೂಡ ನೇತೃತ್ವದ ಕಾಂಗ್ರೆಸ್ ಸರ್ಕಾರ 3ಡಿ ಸರ್ಕಾರವಾಗಿತ್ತು ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಸರ್ಕಾರ ಎಐಸಿಸಿಯ ಹಂಗಾಮಿ ಅಧ್ಯಕ್ಷ್ಯೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರ ಅವರೊಂದಿಗೆ ಶಾಮೀಲಾಗಿ ಅನುಮಾನಾಸ್ಪದ ಭೂ ವ್ಯವಹಾರಗಳನ್ನು ನಡೆಸಿತ್ತು. 3ಡಿ ( ದರ್ಬಾರಿ, ದಮಾದ್ (ಅಳಿಯ) ದಮಾದ್ ಕಿ ದಲಾಲ್ (ಅಳಿಯನ ಮಧ್ಯವರ್ತಿಗಳು) ಎಂಬ ತತ್ವ ಅಳವಡಿಸಿಕೊಂಡಿತ್ತು ಎಂದು ಶಾ ವಾಗ್ದಾಳಿ ನಡೆಸಿದ್ದಾರೆ. 

ಹರ್ಯಾಣದ ರೈತರ ಭೂಮಿಯನ್ನು ದೆಹಲಿ ದರ್ಬಾರ್ ನ ಅಳಿಯನಿಗೆ ನೀಡಿದ ಪಾಪದ ಕೆಲಸವನ್ನು ಹೂಡಾ ಅವರು ಮಾಡಿದ್ದರು ಎಂದು ಅಮಿತ್ ಶಾ ಹೇಳಿದ್ದಾರೆ. 

ಹರ್ಯಾಣದ ಜನತೆಗೆ ಭ್ರಷ್ಟಾಚಾರ ಮುಕ್ತ ಸರ್ಕಾರ ಬೇಕೆಂಬ ಇಚ್ಛೆ ಇದ್ದರೆ ಮನೋಹರ್ ಲಾಲ್ ಖಟ್ಟರ್ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿ ಎಂದು ಅಮಿತ್ ಶಾ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. 

SCROLL FOR NEXT