ದೇಶ

ಲಡಾಖ್ : ಅ. 21ಕ್ಕೆ ರಾಜನಾಥ್ ಸಿಂಗ್ ರಿಂದ 'ಶಿಯೋಕ್ ಸೇತುವೆ 'ಲೋಕಾರ್ಪಣೆ

Nagaraja AB

ನವದೆಹಲಿ: ಲಡಾಖ್ ಬಳಿಯ  ಶಿಯೋಕ್ ನಲ್ಲಿ ನಿರ್ಮಿಸಲಾಗಿರುವ ಅತ್ಯಂತ ಆಯಕಟ್ಟಿನ ಸೇತುವೆಯನ್ನು ಇದೇ  ತಿಂಗಳ 21 ರಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಉಪಸ್ಥಿತಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಾರ್ಪಣೆ ಮಾಡಲಿದ್ದಾರೆ.

ವಿಶ್ವದ ಅತ್ಯುನ್ನತ ಅಡ್ವಾನ್ಸ್ ಲ್ಯಾಂಡಿಂಗ್ ಮೈದಾನ ಡಾರ್ಬಾಕ್  ಹಾಗೂ 16 ಸಾವಿರ ಅಡಿಗಿಂತಲೂ ಎತ್ತರದ ಪ್ರದೇಶದಲ್ಲಿರುವ ದೌಲೆತ್ ಬೇಗ್ ಒಲ್ಡೈ ಪ್ರದೇಶದ 225 ಕಿಲೋ ಮೀಟರ್ ರಸ್ತೆ  ಮಾರ್ಗವನ್ನು  ಈ ಸೇತುವೆ ಸಂಪರ್ಕಿಸಲಿದೆ. ಅಲ್ಲದೇ ಈ  ರಸ್ತೆ  ಕಾರಕೋರಂ ಪರ್ವತ ಶ್ರೇಣಿ ಹಾಗೂ ವಾಸ್ತವ ನಿಯಂತ್ರಣ ರೇಖೆಯ ಹತ್ತಿರದಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸೇತುವೆ ಕಠಿಣಕರವಾಗಿದೆ. ಕೊನೆಯವರೆಗೂ ಸಂಪರ್ಕವನ್ನು ಕಲ್ಪಿಸಲು  ವಿವಿಧ  ಒಟ್ಟು 37 ಸೇತುವೆಗಳ ಅಗತ್ಯವಿದೆ. 50 ಗಡಿ ರಸ್ತೆ ಕಾರ್ಯಪಡೆಯಿಂದ ಈ ಸೇತುವೆಯನ್ನು ಮುಕ್ತಾಯಗೊಳಿಸಲಾಗಿದೆ.

1400 ಅಡಿ ಉದ್ದದ ಸೇತುವೆ 1300 ಅಡಿಗಳಷ್ಟು ಎತ್ತರದಲ್ಲಿದ್ದು, ಪೂರ್ವದ ವಾಸ್ತವ ನಿಯಂತ್ರಣ ರೇಖೆಯಿಂದ (ಎಲ್ ಎಸಿ) ಪ್ರಯಾಣವನ್ನು 14 ಗಂಟೆಯಿಂದ 6. 5 ಗಂಟೆಗೆ ಕಡಿತಗೊಳಿಸುತ್ತದೆ. ಇದು ಎಲ್ ಎಸಿಯಿಂದ ಸುಮಾರು 40 ಕಿಲೋ ಮೀಟರ್ ದೂರದಲ್ಲಿದೆ. 
 

SCROLL FOR NEXT