ದೇಶ

ಸರ್ದಾರ್‌ ಪಟೇಲ್ ಭಾವಚಿತ್ರ ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ

Srinivasamurthy VN

ನವದೆಹಲಿ: ಮಹತ್ವ ಬೆಳವಣಿಗೆಯಲ್ಲಿ ಕೇಂದ್ರೀಯ ಭದ್ರತಾ ಪಡೆಗಳ ಕಚೇರಿಗಳಲ್ಲಿ ದೇಶದ ಮೊಟ್ಟ ಮೊದಲ ಗೃಹ ಸಚಿವ ಹಾಗೂ ಉಪ ಪ್ರಧಾನಮಂತ್ರಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಭಾವಚಿತ್ರವನ್ನು ಅಳವಡಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

ಹೌದು.. ದೇಶದ ಪೊಲೀಸ್, ಕೇಂದ್ರೀಯ ಭದ್ರತಾ ಪಡೆಗಳಿಗೆ ಕೇಂದ್ರ ಗೃಹ ಸಚಿವಾಲಯ ಹೊಸದಾಗಿ ಸಂಚಲನ ಮೂಡಿಸುವ ಆದೇಶ ಹೊರಡಿಸಿದೆ. ದೇಶದಲ್ಲಿರುವ ಎಲ್ಲ ಪೊಲೀಸ್, ಕೇಂದ್ರೀಯ ಭದ್ರತಾ ಪಡೆಗಳ ಕಚೇರಿಗಳಲ್ಲಿ, ದೇಶದ ಮೊಟ್ಟ ಮೊದಲ ಗೃಹ ಸಚಿವ ಹಾಗೂ ಉಪ ಪ್ರಧಾನಮಂತ್ರಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಭಾವಚಿತ್ರವನ್ನು ಅಳವಡಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೊಸದಾಗಿ ಆದೇಶ ಜಾರಿಗೊಳಿಸಿದೆ.

ಭಾವಚಿತ್ರದ ಜತೆಗೆ ನಾವು ಎಂದಿಗೂ ಭಾರತ ದೇಶದ ಭದ್ರತೆ, ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುತ್ತೇವೆ ಎಂಬ ಸಂದೇಶವನ್ನೂ ನಮೋದಿಸಬೇಕು ಎಂದು ಆದೇಶದಲ್ಲಿ ಕಟ್ಟುನಿಟ್ಟಾಗಿ ತಾಕೀತು ಮಾಡಲಾಗಿದೆ. 

'ಸರ್ದಾರ್ ಪಟೇಲ್ ಅವರು ದೇಶಕ್ಕೆ ನೀಡಿರುವ ಕೊಡುಗೆಳನ್ನು ಸ್ಮರಿಸುತ್ತ ಭಾರತೀಯ ಪೊಲೀಸ್ ಇಲಾಖೆಯ ಪ್ರತೀ ಕಚೇರಿಲ್ಲೂ ಪಟೇಲರ ಭಾವಚಿತ್ರ ಅಳವಡಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ ಅವರ ಪ್ರತೀ ಭಾವಚಿತ್ರದಲ್ಲೂ ಅವರ ಒಂದೊಂದು ಸಂದೇಶ ಪ್ರಕಟಿಸುವಂತೆ ಸೂಚಿಸಲಾಗಿದೆ. ಈ ವರ್ಷ ಸರ್ದಾರ್ ಪಟೇಲರ ನೆನಪಿನಾರ್ಥವಾಗಿ ರಾಷ್ಟ್ರೀಯ ಏಕತಾ ದಿವಸ್ ಆಚರಣೆ ಮಾಡಲಾಗುತ್ತಿದ್ದು, ಅಂದಿನಿಂದಲೇ ಕೇಂದ್ರೀಯ ಭದ್ರತಾ ಪಡೆಗಳ ಕಚೇರಿಗಳಲ್ಲಿ ಸರ್ದಾರ್ ಪಟೇಲರ ಭಾವಚಿತ್ರ ಹಾಕುವಂತೆ ಆದೇಶ ನೀಡಿದೆ.

SCROLL FOR NEXT